ಶಾಂತಿ ಹೋಮ 30ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಷಡ್​ಗ್ರಹ ಯೋಗ ಹಿನ್ನೆಲೆಯಲ್ಲಿ ಇಲ್ಲಿನ ಸಾಧನಕೇರಿ ಉಯನಗರದ ಶ್ರೀ ಗೋಪಾಲಾಚಾರ್ಯ ವೇದ ಸಂಸ್ಕೃತ ಪಾಠ ಶಾಲೆಯಲ್ಲಿ ಮಾ. 30ರಂದು ವಿವಿಧ ಶಾಂತಿ ಹೋಮಗಳನ್ನು ಆಯೋಜಿಸಲಾಗಿದೆ.

ಷಡ್​ಗ್ರಹ ಯೋಗದಿಂದ ಮೇಷ, ಮೀನ, ಕುಂಭ, ವೃಶ್ಚಿಕ, ಸಿಂಹ ರಾಶಿಯವರಿಗೆ ಅಶುಭ ಫಲವಿದೆ. ಇದರ ಪರಿಹಾರಕ್ಕಾಗಿ ಅಂದು ಬೆಳಗ್ಗೆ 6 ಗಂಟೆಯಿಂದ ಶ್ರೀ ಲಕ್ಷ್ಮೀ ನರಸಿಂಹ ಹೋಮ, ಶುಂ ಶುಮಾರ ಹೋಮ, ನವಗ್ರಹ ಹಾಗೂ ಮನ್ಯ ಸೂಕ್ತ ಹೋಮಗಳನ್ನು ಪಂ. ರಾಮಾಚಾರ್​ ಅಧ್ಯಾಪಕ ನೇತೃತ್ವದಲ್ಲಿ ನೆರವೇರಿಸಲಾಗುವುದು. ಆಸಕ್ತರು ಮಾ. 29ರೊಳಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಪಾಠ ಶಾಲೆ ಸಂಪರ್ಕಿಸಬಹುದು ಎಂದು ಎಸ್​.ಎಚ್​.ಕಾಂತನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net