

ಪ್ರಶಾಂತ ಭಾಗ್ವತ, ಉಡುಪಿ
ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಪರಾಕ್ರಮ ಮೆರೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ದೇಶವಾಸಿಗರಿಗೆ ಇನ್ನೂ ರೋಮಾಂಚನ ಮೂಡಿಸುತ್ತಿದೆ. ಬ್ರಹ್ಮೋಸ್, ಸುದರ್ಶನ ಚಕ್ರ (ಎಸ್-400) ಹಾಗೂ ಆಕಾಶ್ ಕ್ಷಿಪಣಿಗಳು ತನ್ನ ಸಾಮರ್ಥ್ಯ ಏನೆಂಬುದನ್ನು ವಿಶ್ವಕ್ಕೆ ತೋರ್ಪಡಿಸಿವೆ.
ಭಾರತ ನಿರ್ಮಿತ 3ಡಿ ಕಾರ್ ಹಾಗೂ ರಾಜೇಂದ್ರ ರಾಡರ್ಗಳು ಶತ್ರು ದೇಶಗಳಿಂದ ಬರುವ ಡ್ರೋಣ್, ಮಿಸೈಲ್ ರಾಕೆಟ್ ಮುಂತಾದ ವಿದೇಶಿ ಅಸ್ತ್ರ ಗುರುತಿಸಿ, ಅವುಗಳನ್ನು ಟ್ರ್ಯಾಕ್ ಮಾಡಿ ನಾಶಪಡಿಸುವ ಶಕ್ತಿ ಹೊಂದಿದೆ. ಗಣರಾಜ್ಯೋತ್ಸವದ ಪರೇಡ್ನಲ್ಲಷ್ಟೇ ದೇಶದ ಜನರು ಆಕಾಶ್ ಕ್ಷಿಪಣಿ ನೋಡುತ್ತಿದ್ದರು. ಆದರೆ, ಆಪರೇಷನ್ ಸಿಂಧೂರದಲ್ಲಿ ಆಕಾಶ್ನ ಅತ್ಯದ್ಭುತ ಸಾಮರ್ಥ್ಯ ತಿಳಿಯಿತು. ಶತ್ರುಗಳ ನೂರಾರು ಡ್ರೋಣ್ ಹಾಗೂ ಕ್ಷಿಪಣಿಯನ್ನು ಧ್ವಂಸ ಮಾಡಿರುವುದು ತುಂಬ ತೃಪ್ತಿಯಾಯಿತು. ನಾನೂ ಸಹ ಈ ರಾಡರ್ ಹಾಗೂ ಆಕಾಶ್ ನಿರ್ಮಾಣದಲ್ಲಿ ಅಳಿಲು ಸೇವೆ ಸಲ್ಲಿಸಿದ್ದರಿಂದ ಈಗ ಅತ್ಯಂತ ಹೆಮ್ಮೆ ಆಗುತ್ತಿದೆ. |ಶಾಂತಾ ನಾಯಕ. ನಿವೃತ್ತ ತಾಂತ್ರಿಕ ಅಧಿಕಾರಿ, ಆರ್ಡಿಇ