

ಗುತ್ತಲ: ನೆಗಳೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಾಂತವ್ವ ನಿಂಗಪ್ಪ ಬಾಲಣ್ಣನವರ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ನೆಗಳೂರ ಗ್ರಾಪಂನ ಎರಡನೇ ಅವಧಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಿದ್ದ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಶಾಂತವ್ವ ನಿಂಗಪ್ಪ ಬಾಲಣ್ಣನವರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಗ್ರೇಡ್ 2 ತಹಸೀಲ್ದಾರ್ ಎ.ಬಿ. ಪಾಟೀಲ ಅವರು ಶಾಂತವ್ವ ನಿಂಗಪ್ಪ ಬಾಲಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಕೃಷ್ಣರೆಡ್ಡಿ ಮೈದೂರ, ಸಿದ್ದಪ್ಪ ಬಾಲಣ್ಣನವರ, ಹುಚ್ಚುಸಾಬ್ ನದಾಫ್, ನಿಸಾರ್‌ಅಹ್ಮದ್ ಮುಲ್ಲಾ, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ, ಗ್ರಾಪಂ ಸದಸ್ಯರಾದ ಬಸನಗೌಡ ಸುಕಳಿ, ರುದ್ರಗೌಡ ರೊಡ್ಡಗೌಡ್ರ, ಸುರೇಶ ಸಪ್ಪಣ್ಣನವರ, ಭರಮಣ್ಣ ದೊಡ್ಡೀರಪ್ಪನವರ, ಶಿವಾನಂದಪ್ಪ ಸಪ್ಪಿನ, ಹನುಮಂತಪ್ಪ ದೊಡ್ಡೀರಪ್ಪನವರ, ಪುಟ್ಟಪ್ಪ ಮುದಿಯಣ್ಣನವರ, ಶಾಂತಾ ಶೆಟ್ಟೆಪ್ಪನವರ, ಭಾಗ್ಯಶ್ರೀ ಅಂಗಡಿ, ವಿಜಯಲಕ್ಷ್ಮೀ ಅಂಗಡಿ, ಪಾರ್ವತೆವ್ವ ಹಳ್ಳಾಕಾರ, ಸುಮಲತಾ ತಂಬೂರಿ, ನೀಲವ್ವ ಶಿಡ್ಲಣ್ಣನವರ, ಶಕುಂತಲಾ ಕೆರೂರು, ಹೇಮಲತಾ ಸಂಜೀವಣ್ಣನವರ, ಪಿಡಿಒ ಪವಿತ್ರಾ ಬಿ.ಸಿ., ಕಾರ್ಯದರ್ಶಿ ನಿಂಗಪ್ಪ ಕಮ್ಮಾರ ಇತರರು ಇದ್ದರು.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾಗಿತ್ತು. ಪರಿಶಿಷ್ಟ ವರ್ಗದ ಏಕೈಕ ಸದಸ್ಯೆ ಶಾಂತವ್ವ ಬಾಲಣ್ಣನವರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯೇ ನಡೆಯಲಿಲ್ಲ.