

ಇಳಕಲ್ಲ(ಗ್ರಾ): ಶಾಂತರಸರು ಶ್ರೇಷ್ಠ ಕವಿಗಳಾಗಿ, ಸಂಘಟಕರಾಗಿ, ಸ್ವಾತಂತ್ರೃ ಹೋರಾಟಗಾರರಾಗಿ ಎಲ್ಲ ವಿಭಾಗಗಳಲ್ಲೂ ಪಾಲ್ಗೊಳ್ಳುವ ಮೂಲಕ ಯುವಕರನ್ನು ಪ್ರೇರೆಪಿಸುವ ಶಕ್ತಿಯಾಗಿದ್ದರು ಎಂದು ಸಾಹಿತಿ, ನಿವೃತ್ತ ಶಿಕ್ಷಕ ಡಾ. ಶರಣಪ್ಪ ಗೋನಾಳ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕವಿ, ಬರಹಗಾರ ಶ್ರೀ ಶಾಂತರಸರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತರಸರು ತಮ್ಮ ಕವನಗಳ ಮೂಲಕ ದೇಶಪ್ರೇಮ ಬೆಳೆಸಿದರು. ಜತೆಗೆ ನಶಿಸಿ ಹೋಗುತ್ತಿರುವ ಜಾನಪದ ಸಾಹಿತ್ಯ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಆಡಳಿತ ಮಂಡಳಿ ಚೇರ್ಮನ್ ಬಿ. ಎಂ. ಕಬ್ಬಿಣದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರೊ. ಬಿ. ಬಿ. ಸುಗ್ಗಮದ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಹಾಗೂ ಐಕ್ಯೂಎಸಿ ಸಂಚಾಲಕ ಪ್ರೊ. ಪಿ.ಆರ್. ಪಾಟೀಲ ಉಪಸ್ಥಿತರಿದ್ದರು. ಪ್ರೊ. ಟಿ. ಎಂ. ಕುಲಕರ್ಣಿ ಸ್ವಾಗತ ಕೋರಿದರು. ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಎಸ್.ಎಸ್. ಪಾಟೀಲ ವಂದಿಸಿದರು. ಸಹನಾ ಕೊಪ್ಪರದ ಪ್ರಾರ್ಥಿಸಿದರು. ದೇವಿ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.