ಕಾರ್ಯದಕ್ಷತೆಗೆ ಲಭಿಸಿದ ಪ್ರತಿಫಲ

Red Cross
Published on

ಬಸ್ರೂರು ರಾಜೀವ ಶೆಟ್ಟಿ ಮೆಚ್ಚುಗೆ

ಶಾಂತಾರಾಮ ಶೆಟ್ಟಿಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ದಕ್ಷಿಣ ಕನ್ನಡ ಜಿಲ್ಲಾ ರೆಡ್​ಕ್ರಾಸ್​ನ ಸಭಾಪತಿಯಾಗಿ ಸಾಮಾಜಿಕ ಕಾರ್ಯದ ಮೂಲಕ ಜನಪ್ರಿಯರಾಗಿರುವ ಸಿಎ ಶಾಂತಾರಾಮ ಶೆಟ್ಟಿ ಅಖಿಲ ಭಾರತ ಮಟ್ಟದ ರೆಡ್​ಕ್ರಾಸ್​ಗೆ

ಆಯ್ಕೆಯಾಗಿರುವುದು ಕರ್ನಾಟಕವೇ ಹೆಮ್ಮೆ ಪಡುವ ವಿಚಾರ. 26 ರಾಜ್ಯಗಳ ಪ್ರತಿನಿಧಿ ಭಾಗವಹಿಸಿದ್ದ ಸಭೆಯಲ್ಲಿ ಹೆಚ್ಚು ಮತ ಗಳಿಸಿ ರಾಷ್ಟ್ರೀಯ ಆಡಳಿತ ಮಂಡಳಿಗೆ ಆಯ್ಕೆಯಾಗಿರುವುದು ಅವರ ಕಾರ್ಯದಕ್ಷತೆಗೆ ಲಭಿಸಿದ ಪ್ರತಿಫಲ ಎಂದು ಕರ್ನಾಟಕ ರಾಜ್ಯ ರೆಡ್​ಕ್ರಾಸ್​ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ರೆಡ್​ಕ್ರಾಸ್​ ಭವನದಲ್ಲಿ ಉಡುಪಿ ಜಿಲ್ಲಾ ರೆಡ್​ ಕ್ರಾಸ್​ ಮತ್ತು ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೆಡ್​ ಕ್ರಾಸ್​ ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾದ ಶಾಂತಾರಾಮ ಶೆಟ್ಟಿ ಅವರನ್ನು ಸನ್ಮಾನಿಸಿ ಮಾತಾನಾಡಿದರು.

ಕುಂದಾಪುರದ ರೆಡ್​ ಕ್ರಾಸ್​ ಸಭಾಪತಿ ಜಯಕರ ಶೆಟ್ಟಿ ಮಾತನಾಡಿ, ಶಾಂತಾರಾಮ ಶೆಟ್ಟಿ ಅವರ ಸೇವಾ ಕಾರ್ಯ ಪ್ರಶಂಸಿಸಿದರು.

ಜಿಲ್ಲಾ ರೆಡ್​ ಕ್ರಾಸ್​ ಆಡಳಿತ ಮಂಡಳಿಯ ಸದಸ್ಯರಾದ ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್​, ರಾಘವೇಂದ್ರ ಪ್ರಭು ಕರ್ವಾಲ್​, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸಿ.ಕೆ. ಶ್ಯಾಮಲಾ, ಡಾ. ಜಿ.ಶಂಕರ್​ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಸೋಜನ್​ ಸಿ.ಕೆ., ಪ್ರಾಧ್ಯಾಪಕಿ ಡಾ. ನಿಕೇತನಾ, ಪ್ರೊ. ವಿದ್ಯಾ ಡಿ., ಅಖಿಲ ಭಾರತ ಕುಟುಂಬ ಕಲ್ಯಾಣ ಸಂಸ್ಥೆಯ ಜಿಲ್ಲಾಧ್ಯಕ್ಷ ಭಾಸ್ಕರ್​ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ರೆಡ್​ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ನಿರೂಪಿಸಿದರು. ರೆಡ್​ ಕ್ರಾಸ್​ ಖಜಾಂಚಿ ರಮಾದೇವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net