

ಚಿಕ್ಕೋಡಿ: ಶಾಂತಪ್ಪಣ್ಣಾ ಮಿರಜಿ ಆಚಾರ-ವಿಚಾರ ಅಳವಡಿಸಿಕೊಳ್ಳುವುದರ ಜತೆಗೆ ಅವರು ನಡೆದು ಬಂದ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ಚಿಕ್ಕೋಡಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ಶಾಂತಾ ಹೇಳಿದರು.
ಇಲ್ಲಿನ ಶಾಂತಪ್ಪಣ್ಣಾ ಮಿರಜಿ ಅರ್ಬನ್ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸೈಬರ್ ಸೆಕ್ಯೂರಿಟಿ ತರಬೇತಿ ಕಾರ್ಯಾಗಾರ ಹಾಗೂ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಂತಪ್ಪಣ್ಣಾ ಮಿರಜಿ ಹುಟ್ಟು ಹಾಕಿದ ಸಂಘ, ಸಂಸ್ಥೆಗಳು ಪ್ರಗತಿ ಪಥದಲ್ಲಿ ಮುನ್ನಡೆದಿವೆ ಎಂದರು.
ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನ ವ್ಯವಸ್ಥಾಪಕ ವಿನಯಕುಮಾರ ದೇಸಾಯಿ, ದಿನನಿತ್ಯ ವ್ಯವಹಾರದಲ್ಲಿ ಸಿಬಿಎಸ್ ತಂತ್ರಾಂಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಸಾಗರ ಅನುಸೆ, ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಭಾತೆ, ಉಪಾಧ್ಯಕ್ಷ ಅಮರನಾಥ ಬಸರಗಿ, ಸುರೇಶ ಘರಬುಡೆ, ಅನಿಲ ಸದಲಗೆ, ಯಶವಂತ ಮಿರಜಿ, ಈರಪ್ಪ ಹಂಪಣ್ಣವರ, ಮಹಾವೀರ ಪಾಟೀಲ, ಮಹೇಶ ಲಡಗೆ, ಜಿತೇಂದ್ರ ಸಾಂಗಲೆ, ಮಹಾವೀರ ಮಿರಜಿ, ರಮೇಶ ಧಾಮನ್ನವರ, ಬ್ಯಾಂಕ್ ವ್ಯವಸ್ಥಾಪನಾ ಸಮಿತಿ ಸದಸ್ಯ ಸಚಿನ ಪಾಟೀಲ, ಲೆಕ್ಕಾಧಿಕಾರಿ ನಾಗೇಶ ಕೋಟಗಿ ಇತರರಿದ್ದರು. ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ವಂದೂರೆ ಸ್ವಾಗತಿಸಿದರು. ಪೂರ್ಣಿಮಾ ಕಗೂಡೆ ನಿರೂಪಿಸಿದರು.