

ನುಗ್ಗೇಹಳ್ಳಿ: ಹೋಬಳಿಯ ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಶಾಂತಮ್ಮ ಲಕ್ಷ್ಮ್ಮಣಗೌಡ ಅವಿರೋಧವಾಗಿ ಆಯ್ಕೆಗೊಂಡರು.
ಹಿಂದಿನ ಅಧ್ಯಕ್ಷರಾಗಿದ್ದ ಎನ್. ರವಿಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು. ಶಾಂತಮ್ಮ ಲಕ್ಷ್ಮಣಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹರೀಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷೆ ಶಾಂತಮ್ಮ ಲಕ್ಷ್ಮಣಗೌಡ ಮಾತನಾಡಿ, ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರ ಸಹಕಾರ ಪಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ರಸ್ತೆ, ಒಳಚರಂಡಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ರತ್ನಮ್ಮ ತಿಮ್ಮಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಅಕ್ಕನಹಳ್ಳಿ ಕೃಷಿ ಪತ್ತಿನ ಅಧ್ಯಕ್ಷ ಸೋಸಲಗೆರೆ ಮಧು, ಗ್ರಾಪಂ ಸದಸ್ಯರಾದ ಅಕ್ಕನಹಳ್ಳಿ ಪುಟ್ಟರಾಜು, ಬಾಣನಕೆರೆ ಉಮೇಶ್, ಸೌಭಾಗ್ಯ ಲೋಕೇಶ್, ಜಸಿಂತ ಮೇರಿ, ಜ್ಞಾನ್ ಪ್ರಕಾಶ್, ಗನ್ನಿ ರಾಜ್ ಕುಮಾರ್, ಸರೋಜಾ, ಶಶಿಕಲಾ ಶಂಕರಲಿಂಗ, ನಂಜುಂಡಪ್ಪ, ರಾಜಮ್ಮ, ದಿನೇಶ್, ಕೃಷ್ಣಮೂರ್ತಿ, ಮುಖಂಡರಾದ ಜೆ.ಮಾವಿನಹಳ್ಳಿ ಎಂ.ಎಸ್. ಸುರೇಶ್, ನೇರಲಕೆರೆ ಇಂದ್ರಜಿತ್, ಮಾದಲಗೆರೆ ದಿಲೀಪ್, ಇನಾಸಪ್ಪ, ಪ್ರಭುಸ್ವಾಮಿ, ದಿಲೀಪ್, ಚೈತನ್ಯ ಗೌಡ, ಬಾಬು, ದರ್ಶನ್, ಜೆಸಿಬಿ ನಾಗಣ್ಣ, ಉದ್ಯಮಿ ಮನೋಜ್, ಸಮುದ್ರವಳ್ಳಿ ಪಟೇಲ್ ನಟರಾಜ್, ಗಣೇಶ್, ನೇರಲಕೆರೆ ಡೈರಿ ಅಧ್ಯಕ್ಷ ರಾಮೇಗೌಡ, ಚಂದ್ರೇಗೌಡ, ವರುಣ್, ಚೇತನ್, ದ್ವಾರಕೀಶ್, ಪಿಡಿಒ ಸಂದೀಪ್ ರಾಜ್, ಸೇರಿದಂತೆ ಇತರರು ಹಾಜರಿದ್ದರು.