ಅಧ್ಯಕ್ಷರಾಗಿ ಶಾಂತಮ್ಮ ಅವಿರೋಧ ಆಯ್ಕೆ

Shantamma elected unopposed as president
ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಗೊಂಡ ಶಾಂತಮ್ಮ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
Published on

ತಾಳಿಕೋಟೆ: ತಾಲೂಕಿನ ಕೊಡಗಾನೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಾವದಗಿಯ ಶಾಂತಮ್ಮ ಮಲಕನಗೌಡ ಪಾಟೀಲ ಅವಿರೋಧ ಆಯ್ಕೆಯಾದರು. ಬುಧವಾರ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಶಾಂತಮ್ಮ ಮಲಕನಗೌಡ ಪಾಟೀಲ ಆಯ್ಕೆಯಾಗುವ ಮೂಲಕ ಜೆಡಿಎಸ್ ಎರಡನೇ ಬಾರಿಗೆ ಗ್ರಾಪಂ ತನ್ನ ಹಿಡಿತಕ್ಕೆ ಪಡೆದುಕೊಂಡಿತು.

ಈ ಹಿಂದಿನ ಅಧ್ಯಕ್ಷರಾಗಿದ್ದ ಅಶ್ವಿನಿ ಸಾಹೇಬಗೌಡ ಬಿರಾದಾರ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು. ಬೆಳಗ್ಗೆ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಂತರ ಅವಿರೋಧ ಆಯ್ಕೆ ಘೋಷಣೆ ನಡೆಯಿತು.

22 ಜನ ಸದಸ್ಯರ ಬಲ ಹೊಂದಿರುವ ಕೊಡಗಾನೂರ ಗ್ರಾಪಂ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ 14 ಜನ ಸದಸ್ಯರು ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ತಾಳಿಕೋಟೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನಿಂಗಪ್ಪ ಮಸಳಿ, ಸಹಾಯಕ ಚುನಾವಣಾಧಿಕಾರಿಯಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಕಿರಣಗಿ, ಕಾರ್ಯದರ್ಶಿ ಎಚ್.ಜಿ.ಚೌದ್ರಿ, ಮಹಾಂತಗೌಡ ದೊರೆಗೋಳ, ಬಸನಗೌಡ ಚೌದ್ರಿ, ಶಾಂತಪ್ಪ ಕಟ್ಟಿಮನಿ, ವಿರೇಶ ಹೊಸಮನಿ ಅವರು ನಿರ್ವಹಿಸಿದ್ದರು.

ಸದಸ್ಯರಾದ ಬಸಮ್ಮ ನಾಯ್ಕೋಡಿ, ಆನಂದಗೌಡ ಪಾಟೀಲ, ವಿರೇಶಗೌಡ ಪಾಟೀಲ(ಕಾರನೂರ), ಶಾಂತಮ್ಮ ಕಾರನೂರ, ಮಲ್ಲನಗೌಡ ಇಬ್ರಾಹಿಂಪೂರ, ಮಾದೇವಿ ದೊಡಮನಿ, ಬಸನಗೌಡ ಬಿರಾದಾರ, ಭೀಮನಗೌಡ ತಂಗಡಗಿ, ಅಶ್ವಿನಿ ಬಿರಾದಾರ, ಭೀಮು ನಾಯಕ, ಶಶಿಕಲಾ ನಾಯಕ, ಮಲ್ಲಮ್ಮ ಬಿರಾದಾರ, ನಾಗಮ್ಮ ಬಪ್ಪರಗಿ ಪಾಲ್ಗೊಂಡಿದ್ದರು.

ವಿಜಯೋತ್ಸವ

ಕೊಡಗಾನೂರ ಗ್ರಾಪಂ ಅಧ್ಯಕ್ಷರಾಗಿ ಶಾಂತಮ್ಮ ಪಾಟೀಲ ಅವಿರೋಧ ಆಯ್ಕೆಯಾಗಿದ್ದಕ್ಕೆ ಬೆಂಬಲಿಗರು ಹಾಗೂ ಮುಖಂಡರು, ಜೆಡಿಎಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಮುಖಂಡರಾದ ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಎಂ.ಎಂ.ಪಾಟೀಲ, ಮಡುಸಾಹುಕಾರ ಬಿರಾದಾರ, ರಾಜುಗೌಡ ಕೊಳೂರ, ಪ್ರಭುಗೌಡ ಲಕ್ಕುಂಡಿ, ಅಶೋಕ ಅಸ್ಕಿ, ಬಸನಗೌಡ ಹಳ್ಳಿಪಾಟೀಲ, ಸಾಹೇಬಗೌಡ ಬಿರಾದಾರ, ಮುತ್ತು ಜಾಗೀರದಾರ, ಈಸುಗೌಡ ಲಕ್ಕುಂಡಿ, ಬಸನಗೌಡ ಲಕ್ಕುಂಡಿ, ಪ್ರಭುಗೌಡ ಕಾರಗನೂರ, ಸಿದ್ದನಗೌಡ ಲಕ್ಕುಂಡಿ, ರುದ್ರಪ್ಪಣ್ಣ ನಾಯ್ಕೋಡಿ, ಗೌಡಪ್ಪಗೌಡ ಮಾಳಿ, ಶಾಂತಗೌಡ ಇಬ್ರಾಹಿಂಪುರ, ಬಾಪುಗೌಡ ಪಾಟೀಲ, ಶಿವಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.

ಕೊಡಗಾನೂರ ಗ್ರಾಪಂ ಮತ್ತೆ ಜೆಡಿಎಸ್ ಪಕ್ಷದ ಶಾಂತಮ್ಮ ಪಾಟೀಲ ಆಯ್ಕೆಯಾಗಿದ್ದಾರೆ. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಅವರ ನೇತತ್ವದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗುವುದು. -ಮಡುಸಾಹುಕಾರ ಬಿರಾದಾರ, ಜೆಡಿಎಸ್ ತಾಲೂಕು ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net