ಕಾರ್ತಿಕ ಮಾಸಕ್ಕೆ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ

ಕಾರ್ತಿಕ ಮಾಸ ಆರಂಭದ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದೀಪ ಬೆಳಗಿಸಿದರು. ಕೆ.ವಿ ಮಾದೇಶ್, ಮಹದೇವಸ್ವಾಮಿ, ರಾಜಶೇಖರ್ ಇತರರು ಇದ್ದರು.
ಕಾರ್ತಿಕ ಮಾಸ ಆರಂಭದ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದೀಪ ಬೆಳಗಿಸಿದರು. ಕೆ.ವಿ ಮಾದೇಶ್, ಮಹದೇವಸ್ವಾಮಿ, ರಾಜಶೇಖರ್ ಇತರರು ಇದ್ದರು.
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಗುರುವಾರ ಸಂಜೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಕಾರ್ತಿಕ ಮಾಸಕ್ಕೆ ಚಾಲನೆ ನೀಡಿದರು.

ಕಡೆಯ ಕಾರ್ತಿಕ ಸೋಮವಾರ ರಾತ್ರಿ ದೇಗುಲದಲ್ಲಿ ಮಹಾ ನೈವೇದ್ಯದ ಪೂಜೆ ನೆರವೇರಿಸಿದ ಬಳಿಕ ದೀಪದಗಿರಿ ಒಡ್ಡುವಿನಲ್ಲಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೃಹತ್ ಅಣತೆ ಬೆಳಗಿಸುವ ಮೂಲಕ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಹಾಗಾಗಿ ಕಾರ್ತಿಕ ಮಾಸ ಮಾದಪ್ಪನ ಸನ್ನಿಧಿಯಲ್ಲಿ ವಿಶೇಷತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾಲೂರು ಶ್ರೀಗಳು ದೇಗುಲದಲ್ಲಿ ದೀಪವನ್ನು ಬೆಳಗಿಸಿದರು.

ಬೇಡಗಂಪಣ ಅರ್ಚಕ ಕೆ.ವಿ ಮಾದೇಶ್, ದೇಗುಲದ ಪಾರುಪತ್ತೆದಾರ ಮಹದೇವಸ್ವಾಮಿ, ಪ್ರಾಧಿಕಾರದ ನೌಕರ ರಾಜಶೇಖರ, ಬೇಡಗಂಪಣ ಅರ್ಚಕರು ಇತರರು ಇದ್ದರು.

ಫೋಟೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net