ಶಾಂತಲಿಂಗ ಶ್ರೀಗಳಿಗೆ ‘ಕನ್ನಡ ಕುಲಗುರು‘ ಪ್ರಶಸ್ತಿ ಪ್ರದಾನ ನಾಳೆ

Published on

ನರಗುಂದ: ತಾಲೂಕಿನ ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠ, ಶಿರೋಳ ತೋಂಟದಾರ್ಯ ಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳಿಹಗೆ ಪಟ್ಟಣದ ಬಸವಕೇಂದ್ರ ಹಾಗೂ ಶ್ರೀ ಮುರುಘ ರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ವತಿಯಿಂದ ಮಾ. 3ರಂದು ‘ಕನ್ನಡದ ಕುಲಗುರು’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸವ ಕೇಂದ್ರದ ಅಧ್ಯಕ್ಷ ಚನ್ನಬಸಪ್ಪ ಕಂಠಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಧರ್ಮ ಬೋಧನೆ, ರಚನಾತ್ಮಕ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲ ಸಮಾಜದವರಿಗೆ ಉಣಬಡಿಸಲು ಬಸವಕೇಂದ್ರ ಹಾಗೂ ಶ್ರೀ ಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ಸದಾ ಸಿದ್ಧವಿದೆ. ಬಸವ ಕೇಂದ್ರದಿಂದ ಪ್ರತಿ ತಿಂಗಳು ಮೊದಲ ಸೋಮವಾರ ಶರಣ-ಸಂಗಮ ವಿಶೇಷ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ಮಾ. 3ರಂದು ಆಯೋಜಿಸಿರುವ 10ನೇ ಶರಣ ಸಂಗಮ ಹಾಗೂ ಲಿಂ.ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 76ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು. ಬಸವಕೇಂದ್ರ, ಟ್ರಸ್ಟ್ ಕಾರ್ಯದರ್ಶಿ ಶಂಕ್ರಣ್ಣ ವಾಳದ, ಧರ್ಮದರ್ಶಿ ಸಿ.ಎಚ್. ಕೋರಿ, ಶರಣ ವಿ.ಎನ್. ಕೊಳ್ಳಿಯವರ, ಪತ್ರೆಪ್ಪ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net