ರಂಗಭೂಮಿಗೆ ಶಾಂತ ಕವಿ ಕೊಡುಗೆ ಅಪಾರ

16 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಂತ ಕವಿಗಳನ್ನು ಆಧುನಿಕ ಕರ್ನಾಟಕ ನಾಟಕ ಪಿತಾಮಹ ಎಂದು ಕರೆಯಲಾಗಿದೆ. ಆಧುನಿಕ ರಂಗಭೂಮಿಗೆ ಇವರ ಕೊಡುಗೆ ಅನನ್ಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ವಿನಾಯಕ ನಾಯಕ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಶುಕ್ರವಾರ ಆಯೋಜಿಸಿದ್ದ ಸಕ್ಕರಿ ಬಾಳಾಚಾರ್ಯ "ಶಾಂತಕವಿಗಳ' ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
19ನೇ ಶತಮಾನದ ಆದಿ ಭಾಗದಲ್ಲಿ ಉತ್ತರ ಕರ್ನಾಟಕದ ಧಾರವಾಡ ಹಾಗೂ ಬೆಳಗಾವಿ ಪ್ರದೇಶದಲ್ಲಿ ಮರಾಠಿ ಪ್ರಾಬಲ್ಯದಿಂದ ಕನ್ನಡಿಗರು ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದಾಗ ಸಕ್ಕರಿ ಬಾಳಾಚಾರ್ಯರು ಕನ್ನಡಿಗರಲ್ಲಿ ಕನ್ನಡ ಭಾಷೆ, ಸಂಸತಿ, ಸಾಹಿತ್ಯದ ಬಗ್ಗೆ ಜಾಗೃತಿ, ಅಭಿಮಾನ ಮೂಡಿಸಿದರು. ಕನ್ನಡದಲ್ಲಿ ಕೀರ್ತನೆಗಳೇ ಇಲ್ಲ ಎನ್ನುವ ಕಾಲದಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದರು ಎಂದರು.
ಶಾಂತಕವಿಗಳು ಒಂದು ದೃಷ್ಟಿಯಿಂದ ಕನ್ನಡ ರಂಗಭೂಮಿಗೆ ಮರುಜೀವ ನೀಡಿದವರಾಗಿದ್ದಾರೆ. ಕನ್ನಡದಲ್ಲಿ ಏನಿದೆ? ಎನ್ನುವವರಿಗೆ ಕನ್ನಡದಲ್ಲಿ ಎಲ್ಲವೂ ಇದೆ ಎಂದು ತೋರಿಸಿಕೊಟ್ಟು ಕನ್ನಡದ ಅಸ್ಮಿತೆ ಕಾಪಾಡಿದರು. ಆದರೆ ಅವರ ಬದುಕು, ಬರಹ ಕುರಿತು ಆಗಬೇಕಾದಷ್ಟು ಸಂಶೋಧನೆ ನಡೆಯದಿರುವುದು ವಿಷಾದನೀಯ ಎಂದರು.
ಅಧ್ಯತೆ ವಹಿಸಿದ್ದ ಹಿರಿಯ ವಿಮರ್ಶಕ ಡಾ. ಶಾಮಸುಂದರ ಬಿದರಕುಂದಿ ಮಾತನಾಡಿ, ಕನ್ನಡ ಭಾಷೆ ಹಾಗೂ ಸಂಸತಿ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಹಾಗೂ ಶಾಂತಕವಿಗಳ ಪಾತ್ರ ಅಪಾರ. ಶಾಂತಕವಿಗಳು ರಚಿಸಿದ ಮೊದಲ ನಾಟಕ ಉಷಾಹರಣ ಹಾಗೂ ಸೀತಾಅರಣ್ಯ ಪ್ರವೇಶಗಳು ಅವರಿಗೆ ಹೆಚ್ಚಿನ ಜನಮನ್ನಣೆ ತಂದುಕೊಟ್ಟವು. ಕನ್ನಡ ಸಾಹಿತ್ಯ ಉಳಿಯಬೇಕಾದರೆ ಓದುಗರ ಸಂಖ್ಯೆ ಹೆಚ್ಚಾಗಬೇಕು ಎಂದರು.
ಸಂದ ಅಧ್ಯ ಚಂದ್ರಕಾಂತ ಬೆಲ್ಲದ, ಬಾಬುರಾವ ಸಕ್ರಿ, ಮಾಲತಿ ಪಟ್ಟಣಶೆಟ್ಟಿ, ನಿಂಗಣ್ಣ ಕುಂಟಿ, ರಮೇಶ ನಾಡಗೀರ, ಬಸವರಾಜ ಬೆಂಗೇರಿ, ಹನುಮೇಶ ಸಕ್ರಿ, ವಿ.ಎಚ್​. ಡುಮ್ಮೇರ, ಪ್ರೊ. ಅರವಿಂದ ಕುಲಕಣಿರ್, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಎಸ್​.ಎಂ. ರಾಚಯ್ಯನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net