ಶಂಕರಪುರ ಮಲ್ಲಿಗೆಗೆ 2,300 ರೂಪಾಯಿ!

jasmine
Published on

ಉಡುಪಿ: ಹಲವು ಸಮಯದ ಬಳಿಕ ಶಂಕರಪುರ ಮಲ್ಲಿಗೆ ಒಂದು ಅಟ್ಟೆಯ ಧಾರಣೆ ಗರಿಷ್ಠ ದಾಖಲಾಗಿದ್ದು, ಬುಧವಾರ ಕಟ್ಟೆಯಲ್ಲಿ 2100 ರೂಪಾಯಿ ನಿಗದಿಯಾಗಿತ್ತು.

ಗ್ರಾಹಕರಿಗೆ ಮಾರುಕಟ್ಟೆಯಲ್ಲಿ 2,300 ರೂಪಾಯಿಗಳಂತೆ ಮಾರಾಟವಾಗಿದೆ. ಭಟ್ಕಳ ಮಲ್ಲಿಗೆ ದರ ಕೂಡ ಏರಿಕೆಯಾಗಿದ್ದು, ಕಟ್ಟೆಯಲ್ಲಿ 1030 ರೂ. ಹಾಗೂ ಮಾರುಕಟ್ಟೆಯಲ್ಲಿ 1200ಕ್ಕೆ ಮಾರಾಟವಾಗಿದೆ.

ಮಂಗಳವಾರ ಶಂಕರಪುರ ಮಲ್ಲಿಗೆ 1900 ರೂ. ಇತ್ತು. ಮೋಡ ವಾತಾವರಣದಿಂದ ಮಲ್ಲಿಗೆ ಇಳುವರಿ ಮೇಲೆ ಹೊಡೆತ, ಶ್ರಾವಣ ಮಾಸದಲ್ಲಿ ಹೂವಿಗೆ ಬೇಡಿಕೆ ಬಂದಿರುವುದು ಪ್ರಮುಖ ಕಾರಣ ಎಂದು ಬೆಳೆಗಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net