ಕಡಿಯಾಳಿ ದೇವಸ್ಥಾನದಲ್ಲಿ ಸನಾತನ ಧರ್ಮ ರಕ್ಷಣೆ ಪ್ರಾರ್ಥನೆ

udp-19-kadiyali
Published on

ಉಡುಪಿ: ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್​ ಗುರೂಜಿ 108 ದಿನ 108 ಕ್ಷೇತ್ರ ಪ್ರದಕ್ಷಿಣೆ ಮಹಾ ಸಂಕಲ್ಪ ಅಂಗವಾಗಿ ಬುಧವಾರ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಸಂದರ್ಶಿಸಿದರು.

ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ, ಸನಾತನ ಧರ್ಮ, ಗೋರಕ್ಷಣೆ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಸರದಿ ಅರ್ಚಕ ಶ್ರೀಧರ ಉಪಾಧ್ಯಾಯರವರಿಗೆ ಮನವಿ ಸಲ್ಲಿಸಿ, ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಹಾಯಕ ಹರಿ ಉಪಾಧ್ಯಾಯ , ಶ್ರೀರಂಗ ಉಪಾಧ್ಯಾಯ, ಮಂಜುನಾಥ ಉಪಾಧ್ಯಾಯ, ಗೀತಾಂಜಲಿ.ಎಂ.ಸುವರ್ಣ , ವೀಣಾ ಎಸ್​. ಶೆಟ್ಟಿ, ಸುಧಾಕರ್​ ಶೆಟ್ಟಿ, ಜಯರಾಮ್​, ಶ್ವೇತಾ ಶೆಟ್ಟಿಗಾರ್​ ದಂಪತಿ, ಸಚಿನ್​ , ಪ್ರೀತಿ , ಸದಾನಂದ ಆಚಾರ್ಯ , ಸತೀಶ್​ ದೇವಾಡಿಗ, ನಿಲೇಶ್​, ಶಶಾಂಕ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net