ಸದಾಶಿವ ಆಯೋಗ ವರದಿ ಅನುಮೋದನೆಗೆ ಒತ್ತಾಯ

CTD 21 shankrappa.jpg nn
Published on

ಚಿತ್ರದುರ್ಗ: ಸದಾಶಿವ ಆಯೋಗ ವರದಿ ಅನುಮೋದಿಸಿ ಶೀಘ್ರ ಕೇಂದ್ರಕ್ಕೆ ಅದನ್ನು ಶಿಫಾರಸು ಮಾಡುವ ಮೂಲಕ ಮಾದಿಗ ಮತ್ತಿತರ ವರ್ಗ ಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಂತೆ ಕರ್ನಾಟಕ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಬಿಜೆಪಿ ಉಪಾಧ್ಯಕ್ಷ ಶಂಕ್ರಪ್ಪ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ನಗರದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮಾದಿಗ ಸಮುದಾ ಯಕ್ಕೆ ಒಳ ಮೀಸಲು ಕೊಡುವ ಕುರಿತಂತೆ ಕೊಟ್ಟಿರುವ ಭರವಸೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಹಾಗೂ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ಈಡೇರಿಸಬೇಕು.
ಆದರೆ ನಾನು ಸರ್ಕಾರದ ಮೇಲೆ ಹೇರುತ್ತಿರುವ ಒತ್ತಡ ಸಾಲದಾಗಿದೆ. ಇದನ್ನು ಗಮನಿಸಿರುವ ಸಮುದಾಯದ ಜನರು ಧಂಗೆ ಏಳುವ ಸೂಚನೆಗಳು ಸಿಕ್ಕಿವೆ. ಜನ ಧಂಗೆ ಎದ್ದರೆ ಅದಕ್ಕೆ ರಾಜ್ಯಸರ್ಕಾರವೇ ಹೊಣೆ ಹೊರಬೇಕಾಗುತ್ತದೆಂದು ಎಚ್ಚರಿಸಿದರು. 30 ಪ್ರಜಾ ಪ್ರತಿನಿಧಿಗಳ ವಿರೋಧದಿಂದಾಗಿ,ಬೇಡಿಕೆ ಪರವಿರುವ 6 ಜನ ಪ್ರತಿನಿಧಿಗಳ ದನಿ ಬಲ ಸಿಗುತ್ತಿಲ್ಲ. ಬೇಡಿಕೆ ಈಡೇರಿಕೆಗೆ ತೀವ್ರ ಸ್ವರೂಪದ ಹೋರಾಟದ ಅಗತ್ಯವಿದೆ. ಬೇಡಿಕೆಯನ್ನು ವಿರೋಧಿಸುತ್ತಿರುವಜನಪ್ರತಿನಿಧಿಗಳು ಸಾಮಾಜಿಕ ನ್ಯಾಯಕ್ಕಾಗಿ ಸಹಮತ ತೋರಿಸ ಬೇಕಿದೆ ಎಂದು ಮನವಿ ಮಾಡಿದರು.
ದಶಕಗಳ ಹೋರಾಟದ ಬಳಿಕ ಈಗ ಭರವಸೆ ಬೆಳಕು ಕಾಣಿಸಿದೆ. ಆದರೆ ಸಂಖ್ಯೆ ಕಡಿಮೆ ಇದ್ದು ಹೆಚ್ಚು ಲಾಭ ಪಡೆಯುತ್ತಿರುವವರು ಬೇಡ ಎನ್ನುತ್ತಿರುವುದು ದುರಂತ. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸಿಗ ಬೇಕು. ಸಲ್ಲಿಕೆಯಾದ ಅಂದಿನಿಂದ ಈವರೆಗೂ ಸದಾ ಶಿ ವ ಆಯೋಗ ವರದಿಯನ್ನು ಅಧಿಕಾರದಲ್ಲಿದ್ದ ಐವರು ಮುಖ್ಯಮಂತ್ರಿಗಳು ಗಮನಿಸಿಲ್ಲ. ಹಾವನೂರು ವರದಿ ಅವೈಜ್ಞಾನಿಕವೆಂದು ತಿರ ಸ್ಕ ರಿಸಲಾಗಿತ್ತು. ಈಗ ಸದಾಶಿವ ವರದಿ ಆಧರಿಸಿ ಮೀಸಲು ಸವಲತ್ತು ದೊರೆಯಲಿ ಎಂದ ಅವರು,ಬೇಡಿಕೆ ಈಡೇರಿಕಾಗಿ ಪಕ್ಷದಿಂದ ಹೊರ ನಡೆಯಬೇಕಾಗುತ್ತದೆ ಎಂದರು.

ಮುಖಂಡ ಹುಲ್ಲೂರು ಕುಮಾರ್ ಮಾತನಾಡಿ,ಮಾದಿಗರ ಬೇಡಿಕೆ ಈಡೇರಿಸಲು ವಿಫಲವಾಗಿದ್ದರಿಂದಲೇ ರಾಜ್ಯ,ಕೇಂದ್ರದಲ್ಲಿ ಮಂತ್ರಿಗಳಾಗಿದ್ದ ಅನೇಕರು ಸೋತಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೊಡದಿದ್ದರೆ ಬಿಜೆಪಿ ಕೂಡ ನಾಶವಾಗಲಿದೆ ಎಂದರು. ಮುಖಂಡ ಜಗನ್ನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net