ಶಂಕರಯ್ಯ ಸ್ವಾಮೀಜಿ ಪ್ರಥಮ ಪುಣ್ಯಸ್ಮರಣೋತ್ಸವ

Shankaraiah Swamiji's First Remembrance Day
Shankaraiah Swamiji's First Remembrance Day
Published on

ತೇರದಾಳ: ಮೌನಯೋಗಿ ಶಂಕರಯ್ಯ ಸ್ವಾಮೀಜಿ ಅವರ ಪ್ರಥಮ ಪುಣ್ಯಸ್ಮರಣೋತ್ಸವ ಅಂಗವಾಗಿ ತಾಲೂಕಿನ ಸಸಾಲಟ್ಟಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಕತೃ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಸ್ಥಳೀಯ ಶಿವಲಿಂಗೇಶ್ವರ ಮತ್ತು ಕಲ್ಮೇಶ್ವರ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಸುತ್ತಮುತ್ತಲಿನ ಗ್ರಾಮಗಳಿಂದಲೂ ಬಂದಂತಹ ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು.

ಹಿರಿಯರಾದ ಚನ್ನಮಲ್ಲಪ್ಪ ಮದಲಮಟ್ಟಿ, ಜಿ.ಆರ್.ಶೇಗುಣಸಿ, ಪರಪ್ಪ ಹನಗಂಡಿ, ಪ್ರಭಾಕರ ಕಾಪಸಿ ಗುರುಬಸು ಹುಕ್ಕೇರಿ, ಶಿವಲಿಂಗ ಉಳ್ಳಾಗಡ್ಡಿ, ಭರಮಪ್ಪ ಉಳ್ಳಾಗಡ್ಡಿ, ಸುರೇಶ ಮರಡಿ, ರಾಜು ಉಳ್ಳಾಗಡ್ಡಿ, ಮುತ್ತು ಬದ್ರಶೆಟ್ಟಿ, ಅಶೋಕ ಉಳ್ಳಾಗಡ್ಡಿ, ಮಲ್ಲೇಶ ಉಳ್ಳಾಗಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net