

ರಟ್ಟಿಹಳ್ಳಿ: ಪಟ್ಟಣದ ಬ್ರಾಹಣ ಸಮಾಜ ಮತ್ತು ಶಂಕರ ಸೇವಾ ಸಮಿತಿ ವತಿಯಿಂದ ಸ್ಥಳೀಯ ಕದಂಬೇಶ್ವರ ದೇವಸ್ಥಾನದಲ್ಲಿ ಬುಧವಾರ ಆದಿಶಂಕರಾಚಾರ್ಯರ ಜಯಂತಿ ನಿಮಿತ್ತ ಪಲ್ಲಕ್ಕಿ ಉತ್ಸವ ಮತ್ತು ಪ್ರಮುಖ ಬೀದಿಗಳಲ್ಲಿ ಶಂಕರರ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಕದಂಬೇಶ್ವರನಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ನೈವೇದ್ಯ ಅರ್ಪಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಶಂಕರಾಚಾರ್ಯರ ಪಲ್ಲಕ್ಕಿ ಉತ್ಸವ ಬಳಿಕ ಪ್ರಮುಖ ಬೀದಿಗಳಲ್ಲಿ ಸಮ್ಮಾಳದೊಂದಿಗೆ ಭಾವಚಿತ್ರದ ಮೆರವಣಿಗೆ ಜರುಗಿತು.
ದೇವಸ್ಥಾನದ ಅರ್ಚಕ ಗಿರೀಶ ನಾಡಗೇರ ಮಾತನಾಡಿ, ಶಂಕರಾಚಾರ್ಯರು ಅದ್ವೆತ ಸಿದ್ಧಾಂತ ಪ್ರತಿಪಾದಿಸಿದ್ದರು. ಸನಾತನ ಹಿಂದು ಧರ್ಮದ ಪುನಶ್ಚೇತನಕ್ಕೆ ಅಪಾರವಾದ ಕೊಡುಗೆ ನೀಡಿದ್ದರು ಎಂದರು.
ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 87 ಫಲಿತಾಂಶ ಪಡೆದ ಸಮಾಜದ ವಿದ್ಯಾರ್ಥಿನಿ ಹರ್ಷಿತಾ ಕುಲ್ಕರ್ಣಿ ಮತ್ತು ಜಿಲ್ಲಾ ಅತ್ಯುತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದತ್ತಾತ್ರೇಯ ಜೋಷಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಶಂಕರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಮಕರಿ, ಪ್ರದೀಪ ಕುಲ್ಕರ್ಣಿ, ಸುಶೀಲ ನಾಡಗೇರ, ಗಿರಿಜಾ ನಾಡಗೇರ, ಸುಬ್ರಮಣ್ಯ ನಾಡಗೇರ, ಸುರಭಿ ನಾಡಗೇರ, ಶುಭಾ ಗುಂಡಾಭಟ್ಟರ, ಪರಿಮಳ ಅದ್ವಾನಿ, ಲಕ್ಷ್ಮೀ ಅದ್ವಾನಿ, ವಿಶ್ವನಾಥ ಅಧ್ಯಾಪಕ, ಉಷಾ ಮಕರಿ, ವಿಜೇಂದ್ರ ಶಿರೋಳ, ಅನಂತ ಅದ್ವಾನಿ, ಲಕ್ಷ್ಮೀ ಅಧ್ಯಾಪಕ, ರತ್ನಾ ದೇಶಪಾಂಡೆ, ರಾಘವೇಂದ್ರ ಸವಣೂರು, ದೀಪಾ ಕುಲ್ಕರ್ಣಿ, ವಾದಿರಾಜ ಕಟ್ಟಿ, ವೆಂಕಟೇಶ ಕಟ್ಟಿ ಸಮಾಜದದವರು ಉಪಸ್ಥಿತರಿದ್ದರು.