ನಗರದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ: ವಿವಿಧ ಸಂಘಟನೆಗಳಿಂದ ಆಯೋಜನೆ

Shankaracharya Jayanti Celebration Mandya
Published on

ಮಂಡ್ಯ: ನಗರದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆದಿ ಶಂಕರಾಚಾರ್ಯರು ಹಾಗೂ ರಾಮಾನುಜಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗಣಪತಿ ದೇವಾಲಯದಿಂದ ಆಚಾರ್ಯರ ಭಾವಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿಪ್ರ ಹಾಗೂ ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆ ಗಳ ಮುಖಂಡರು, ವೇದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಂಡೇ ವಾದನ , ವಿಶ್ವೇಶ್ವರಯ್ಯ ವೇಷಧಾರಿ, ಪಟ ಕುಣಿತ, ನಾದ ಸ್ವರ, ಡೊಳ್ಳು ಕುಣಿತಗಳ ಜಾನಪದ ಕಲಾ ಪ್ರಕಾರದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ನೆಹರುನಗರದ ಶಂಕರ ಮಠದಲ್ಲಿ ಪೂಜೆ ಸಲ್ಲಿಸಿ ನಂತರ ಗಣಪತಿ ದೇವಾಲಯದಲ್ಲಿ ಮೆರವಣಿಗೆ ಸಂಪನ್ನಗೊಂಡಿತು. ವೇದ ಬ್ರಹ್ಮ ಶಿವಶಂಕರ ದೀಕ್ಷಿತ್ ಪ್ರವಚನ ನೀಡಿದರು.

ಬ್ರಾಹ್ಮಣ ಸಭಾದ ಅಧ್ಯಕ್ಷ ಪ್ರೊ.ನರಸಿಂಹಮೂರ್ತಿ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಕಾರ್ಯದರ್ಶಿ ರಾಘವೇಂದ್ರ, ಬಬ್ಬೂರು ಕಮ್ಮೆಯ ಬಾಲಾಜಿ, ಗೋಪಿನಾಥ್, ಲಕ್ಷ್ಮೀನಾರಾಯಣ, ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಜಿ.ವಿ.ನಾಗರಾಜು, ಕಲಾಶ್ರೀ ವಿದ್ಯಾಶಂಕರ್, ಜಿ.ವಿ.ಕುಮಾರ್, ಅರುಣ್‌ಪ್ರಸಾದ್, ಲಲಿತಾ ಗುಂಡೂರಾವ್, ಗೋಪಾಲಕೃಷ್ಣ, ಗೋಪಾಲ್ ಶೆಣೈ, ವೆಂಕಟೇಶ್ ಇತರರಿದ್ದರು. ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಉಪನಯನ ಅನ್ನದಾಸೋಹ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net