ಕುಕ್ಕೆ ಕ್ಷೇತ್ರಕ್ಕೆ ಶಂಕರಭಾರತಿ ಶ್ರೀ ಭೇಟಿ: ಯವಸ್ಥಾಪನಾ ಸಮಿತಿ ಅಧ್ಯಕ್ಷರಿಂದ ಗೌರವಾರ್ಪಣೆ

New Project (7)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೈಸೂರಿನ ಕೃಷ್ಣರಾಜನಗರದ ವೇದಾಂತ ಭಾರತಿ ಪೀಠಾಧೀಶ ಶ್ರೀ ಶಂಕರಭಾರತಿ ಮಹಾಸ್ವಾಮಿಗಳು ಸೋಮವಾರ ಭೇಟಿ ನೀಡಿದರು.

ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಪುರೋಹಿತ ಮಧುಸೂದನ ಕಲ್ಲೂರಾಯ ನೇತೃತ್ವದಲ್ಲಿ ಮಂತ್ರಘೋಷ ನೆರವೇರಿತು. ಹೊಸಳಿಗಮ್ಮನ ಗುಡಿಯಲ್ಲಿ ಕುಂಕುಮಾರ್ಚನೆ ನೆರವೇರಿಸಿದರು.

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಶ್ರೀಗಳನ್ನು ಗೌರವಿಸಿದರು. ಫಲಮಂತ್ರಾಕ್ಷತೆ ಪ್ರದಾನಿಸಿದ ಬಳಿಕ ಶ್ರೀಗಳು ಆಶೀರ್ವಚನ ನೀಡಿದರು. ದೇವಳ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಪ್ರಮುಖರಾದ ಕೆ.ಎಂ.ಗೋಪಿನಾಥ್ ನಂಬೀಶ, ನೇಮಿರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net