ಹಿಂದು ಧರ್ಮದ ಉನ್ನತಿಗೆ ಶ್ರಮಿಸಿದ ಶಂಕರರು

Untitled-1
ಕೋಲಾರದ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ನಡೆದ ಶಂಕರಾಚಾರ್ಯರ ಜಯಂತಿಯಲ್ಲಿ ಮಕ್ಕಳು ವೇಷಭೂಷಣ ಪ್ರದರ್ಶಿಸಿದರು. ವಿಜಯಲಕ್ಷಿ$್ಮ, ಶಂಕರಸೇವಾ ಸಮಿತಿ ಪದಾಧಿಕಾರಿಗಳಾದ ಡಾ.ಎಂ.ವಿ.ಜಯರಾಂ, ರವಿಶಂಕರ್​, ರಾಮಕೃಷ್ಣ, ಅಯ್ಯರ್​, ಶ್ರೀಕಂಠನ್​, ಹಾಬಿ ರಮೇಶ್​ ಇದ್ದರು.
Published on

ಕೋಲಾರ : ಹಿಂದು ಧರ್ಮದ ಉನ್ನತಿಗಾಗಿ ಶೃಂಗೇರಿ, ಕೇದಾರ, ಜಗನ್ನಾಥಪುರಿ, ದ್ವಾರಕ ಹೀಗೆ ದೇಶದಲ್ಲಿ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಆತ್ಮಜ್ಞಾನದ ಮಾರ್ಗ ತೋರಿಸಿಕೊಟ್ಟ ಕೀರ್ತಿ ಶಂಕರಾಚಾರ್ಯರದ್ದು ಎಂದು ನಗರದ ಕೋಟೆ ಶೃಂಗೇರಿ ಶಂಕರ ಮಠದ ಧಮಾರ್ಧಿಕಾರಿ ಕೆ.ಎನ್​.ರಾಮಕೃಷ್ಣ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಸಂಸತಿ ಇಲಾಖೆ ಆಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶ್ರೀ ಶಂಕರಾಚಾರ್ಯರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಸತ್ಯವನ್ನು ಸತ್ಯವೆಂದು ಭಾವಿಸಿದಾಗ ದು@ಖದ ಪರಂಪರೆ ಕಟ್ಟಿಟ್ಟ ಬುತ್ತಿ. ಇದಕ್ಕೆ ಪರಿಹಾರವೇ ಜ್ಞಾನಿ ಆಗುವುದು. ಉಪನಿಷತ್​ ಸಾರವೇ ಆಗಿರುವ ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಅಯಮಾತ್ಮ ಬ್ರಹ್ಮ, ಪ್ರಜ್ಞಾನಂ ಬ್ರಹ್ಮ ಈ ಮಹಾ ವಾಕ್ಯಗಳ ಶ್ರವಣ, ಮನನ ಮತ್ತು ಅನುಷ್ಠಾನಗಳ ಮೂಲಕ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ನಾನು ಯಾರು ಎಂಬುದನ್ನು ಸಾಕ್ಷಾತ್ಕರಿಸಿಕೊಳ್ಳುವುದು ನಮ್ಮೆಲ್ಲರ ಜೀವನದ ಧ್ಯೇಯವಾಗಬೇಕು ಎಂಬುದೇ ಭಗವತ್ಪಾದಾಚಾರ್ಯ ಶ್ರೀಶಂಕರರ ಸಾರ್ವಕಾಲಿಕ ಸಂದೇಶವೆಂದು ತಿಳಿಸಿದರು. ಉಪ ತಹಸೀಲ್ದಾರ್​ ಹಂಸಾ ಮರಿಯಾ ಮಾತನಾಡಿ, ಶಂಕರಾಚಾರ್ಯರ ತತ್ವಗಳನ್ನು ಪಾಲಿಸುವ ಮೂಲಕ ಸುಂದರ ಸಮಾಜ ನಿರ್ಮಿಸೋಣ, ಅವರ ಆದರ್ಶವನ್ನು ಪಾಲಿಸೋಣ ಎಂದು ತಿಳಿಸಿದರು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ, ಶೃಂಗೇರಿ ಶಂಕರ ಮಠ, ಶಂಕರಸೇವಾ ಸಮಿತಿ ಪದಾಧಿಕಾರಿಗಳಾದ ಡಾ.ಎಂ.ವಿ.ಜಯರಾಂ, ರವಿಶಂಕರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net