ಶಂಕರಾಚಾರ್ಯರರ ಗ್ರಂಥ ಬದುಕಿಗೆ ಮಾರ್ಗದರ್ಶಿ

nrp shankar jayanthi
ಎನ್.ಆರ್.ಪುರದಲ್ಲಿ ಏರ್ಪಡಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಸದಾಶಿವಭಟ್ ಉಪನ್ಯಾಸ ನೀಡಿದರು. ರವಿಪಟವದರ್ನ್, ರಾಮಪ್ರಸಾದ್, ಎನ್.ಶ್ರೀನಾಥ್ ಇದ್ದರು.
Published on

ಎನ್.ಆರ್.ಪುರ: ಶಂಕರಾಚಾರ್ಯರು ಕಾಲ್ನಡಿಗೆಯಲ್ಲೇ ಭರತ ಖಂಡವನ್ನು 3 ಬಾರಿ ಪರ್ಯಟನೆ ಮಾಡಿ ಸನಾತನ ಧರ್ಮವನ್ನು ಪ್ರಚುರ ಪಡಿಸಿದರು ಎಂದು ಶಾಂಕರ ತತ್ವ ಅಭಿಯಾನದ ಜಿಲ್ಲಾ ಸಂಚಾಲಕ ಸದಾಶಿವಭಟ್ ಹೇಳಿದರು.
ಅಗ್ರಹಾರದ ಗಾಯತ್ರಿ ದೇವಸ್ಥಾನದಲ್ಲಿ ಬುಧವಾರ ಶಾಂಕರ ತತ್ವ ಅಭಿಯಾನದಡಿ ಏರ್ಪಡಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದ ಅವರು, ಶಂಕರರು ಭರತ ಖಂಡದ 4 ದಿಕ್ಕಿನಲ್ಲಿ 4 ಮಠ ಸ್ಥಾಪನೆ ಮಾಡಿ ಪ್ರತಿ ಮಠಕ್ಕೂ ಶಿಷ್ಯರನ್ನು ನೇಮಿಸಿ ಸನಾತನ ಧರ್ಮ ಪ್ರಚಾರ ನಡೆಸಿದರು. ಶಂಕರಾಚಾರ್ಯರರು ರಚಿಸಿದ ಗ್ರಂಥಗಳನ್ನು ಓದಿ ಅಭ್ಯಾಸ ಮಾಡಿದರೆ ಜೀವನಕ್ಕೆ ಅನುಕೂಲವಾಗಲಿದೆ ಎಂದರು.
ಶಾಂಕರ ತತ್ವ ಅಭಿಯಾನದ ಅಧ್ಯಕ್ಷ ರಾಮಪ್ರಸಾದ್ ಮಾತನಾಡಿ, ಎಲ್ಲಾ ಭಜನಾ ಮಂಡಳಿಯ ಸದಸ್ಯರು ಭಜನೆ ಹಾಡುಗಳನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಸತ್ಸಂಗದಿಂದ ನೆಮ್ಮದಿ, ಆರೋಗ್ಯ ಪಡೆಯಬಹುದು ಎಂದು ಹೇಳಿದರು.
ತಾಲೂಕು ಸಂಚಾಲಕ ಎನ್.ಶ್ರೀನಾಥ್ ಮಾತನಾಡಿ, ಕೇಂದ್ರ ಭಜನಾ ಮಂಡಳಿಯಿಂದ ಬರುವ ಮಾಹಿತಿಯನ್ನು ಎಲ್ಲ ಭಜನಾ ಮಂಡಳಿ ಅವರಿಗೆ ತಿಳಿಸುತ್ತಿದ್ದೇವೆ. ಅದನ್ನು ನೀವು ಅನುಸರಿಸಿ ನಮಗೆ ಸಹಕಾರ ನೀಡಬೇಕು. ಪ್ರತಿಯೊಂದು ಭಜನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಸಹ ಸಂಚಾಲಕ ರವಿಪಟವರ್ದನ್, ಅನಿತಾ ಶ್ರೀನಾಥ್ ಸೇರಿದಂತೆ ಎಲ್ಲ ಭಜನಾ ಮಂಡಳಿಯ ಸದಸ್ಯರು ಶಂಕರ ಜಯಂತಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net