ಶಂಕರ ಸ್ವಾಮೀಜಿ ನಮಗೆಲ್ಲ ದಾರಿದೀಪ

24Athani1
Published on

ಅಥಣಿ: ನಾಡಿನುದ್ದಗಲಕ್ಕೂ ಸಂಚರಿಸಿ ಬಸವತತ್ತ್ವವನ್ನು ಸುಮಾರು 30 ವರ್ಷಗಳ ಕಾಲ ಪ್ರಸಾರ ಮಾಡಿದ ಕೀರ್ತಿ ಶೆಟ್ಟರಮಠದ ಲಿಂ.ಶಂಕರ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದು ಶೆಟ್ಟರಮಠದ ಮಠಾಧೀಶ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಪಟ್ಟಣದ ಶೆಟ್ಟರಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲಿಂ.ಶಂಕರ ಸ್ವಾಮೀಜಿಯವರ 8ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಕರ್ತೃ ಗದ್ದುಗೆಗೆ ವಚನಾಭೀಷೆಕ ಮಾಡಿ ಮಾತನಾಡಿ, ಬಸವ ಸಂದೇಶ ಸಾರಿದ ಅವರು ಪ್ರವಚನ ಕೇಸರಿ ಎಂದು ಬಿರುದು ಪಡೆದಿದ್ದರು. ಅಂತಹ ಪೂಜ್ಯರ ಆದರ್ಶಮಯ ಬದುಕು ನಮಗೆಲ್ಲ ದಾರಿದೀಪ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ನಡೆಯಬೇಕು ಎಂದರು.

ಮುರುಗೆಪ್ಪ ತೊದಲಬಾಗಿ, ಸಂಗಪ್ಪ ಉಣ್ಣಿ ಮಾತನಾಡಿದರು. ಗಿರೀಶ ದಿವಾನಮಳ, ನಿತ್ಯಾನಂದ ಚರಂತಿಮಠ, ಲೀಲಾವತಿ ಮೆನಸಿ, ಸುರೇಖಾ ತಾಂಬಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net