ವಿಜಯಪುರ: ನಗರದ ಬಾಗಲಕೋಟ ರಸ್ತೆಯಲ್ಲಿರುವ ವಜ್ರ ಹನುಮಾನ ಬಡಾವಣೆಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶೃಂಗೇರಿ ಶಾಖಾ ಮಠದಲ್ಲಿ ಮೇ 18 ರಿಂದ ಮೇ 23 ರವರೆಗೆ ಶಂಕರ ಜಯಂತ್ಯುತ್ಸವ ನಡೆಯಲಿದೆ.
ಶೃಂಗೇರಿ ಪೀಠಾಧಿಪತಿ ಶ್ರೀ ಭಾರತಿ ತೀರ್ಥ ಸ್ವಾಮಿಗಳ ಮತ್ತು ವಿದುಶೇಖರ ಭಾರತಿ ಸ್ವಾಮಿಗಳ ಆಜ್ಞೆಯಂತೆ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಮೇ 18 ರಿಂದ ಮೇ 23 ರವರೆಗೆ ಪ್ರತಿದಿನ ಬೆಳಗ್ಗೆ 9 ರಿಂದ 11 ರವರೆಗೆ ರುದ್ರಾಭಿಷೇಕ, ಆರತಿ, ಮಂತ್ರಪುಷ್ಪ ಮಧ್ಯಾಹ್ನ 11ರಿಂದ 12 ರವೆರೆಗೆ ವಿವಿಧ ಭಜನಾ ಮಂಡಳಿಗಳಿಂದ ಸೌಂದರ್ಯ ಲಹರಿ ಪಠಣ, ಮಂಗಳಾರತಿ ಜರುಗಲಿವೆ. ಜಯಂತಿಯ ಪ್ರತಿ ಮಧ್ಯಾಹ್ನ 1 ರಿಂದ 1.30 ರವರೆಗೆ ಪ್ರವಚನ ನಂತರ ಪ್ರಸಾದ ವಿತರಣೆ ಸಂಜೆ 6.30 ಕ್ಕೆ ರಥೋತ್ಸವ, ಅಷ್ಟಾವಧಾನ ಸೇವೆ ಮತ್ತು ಮಂಗಳಾರತಿ ನಡೆಯಲಿದೆ.
ಮೇ 20 ರಂದು ಬೆಳಗ್ಗೆ 11ಕ್ಕೆ ವೀಣಾ ಥಿಟೆ ತಂಡದವರಿಂದ ಸಂಗೀತ ಸೇವೆ, ಮೇ 21 ರಂದು ಪೌರ್ಣಿಮೆ ದಿನ ಶ್ರೀ ಸತ್ಯನಾರಾಯಣ ಪೂಜೆ, ಗ್ರಾಮ ಪ್ರದಣೆ, ಅವಭೃತ ಸ್ನಾನ, ಆರತಿ ಮತ್ತು ಕುಂಕುಮಾರ್ಚನೆ ಜರುಗಲಿದೆ ಮಠದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.