ಕೃಷ್ಣರಾಜಸಾಗರ ದಲ್ಲಿ ಶಂಕರಾಚಾರ್ಯ ಜಯಂತಿ

12-05--krs2
Published on

ಕೆ.ಆರ್.ಸಾಗರ : ಭಾರತೀಯ ವೇದಾಂತ ಕ್ಷೇತ್ರಕ್ಕೆ ಆದಿಗುರು ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಬ್ರಾಹ್ಮಣ ಮಹಾಸಭಾ ಮುಖಂಡ ಎಂ.ಜಿ.ಎನ್. ಪ್ರಸಾದ್ ಹೇಳಿದರು. ಕೃಷ್ಣರಾಜಸಾಗರದ ಬ್ರಾಹ್ಮಣ ಮಹಾಸಭಾ ವತಿಯಿಂದ ಕೆ.ಆರ್.ಸಾಗರ ಸಂತೆಮಾಳದಲ್ಲಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಂಕರಚಾರ್ಯರ ಜಯಂತಿ (ತತ್ವ ಜ್ಞಾನಿಗಳ ದಿನಾಚರಣೆ) ಸಂದರ್ಭ ಅವರು ಮಾತನಾಡಿದರು.
ಶಂಕರರ ಅದ್ವೈತ ತತ್ವ ಮತ್ತು ಸಿದ್ಧಾಂತ ಜಗತ್ತಿಗೆ ಬೆಳಕು ನೀಡಿದೆ. ಅದು ಎಲ್ಲ ದೇಶ, ಕಾಲಕ್ಕೂ ಅನ್ವಯ. ಆ ನಿಟ್ಟಿನಲ್ಲಿ ನಾವು ಸಾಗಿದರೆ ಬದುಕು ಸಾರ್ಥಕ ಎಂದರು. ದೇವಾಲಯದಲ್ಲಿರುವ ಶಂಕರಚಾರ್ಯರ ಪ್ರತಿಮೆಗೆ ಅರ್ಚಕ ಶಂಕರಪ್ರಸಾದ್ ನೇತೃತ್ವದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ರೀತಿಯ ಅಭಿಷೇಕ, ವಿವಿಧ ಹೂಗಳಿಂದ ಅಲಂಕಾರ ಸಲ್ಲಿಸಲಾಯಿತು.
ನಂತರ ಶ್ರೀ ಶಂಕರಚಾರ್ಯರ ಅಲಂಕೃತ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಬ್ರಾಹ್ಮಣ ಮಹಾಸಭಾ ಮುಖಂಡರಾದ ಸತೀಶ್, ಕಿಟ್ಟಪ್ಪ, ಎಚ್.ಎ.ವಿಜಯಶಂಕರ್, ರವಿಶಂಕರ್, ಜಯರಾಂ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net