ಬಿಜೆಪಿ ಕಚೇರಿಯಲ್ಲಿ ಶಂಕರ ಜಯಂತಿ ಆಚರಣೆ

Shankara Jayanti celebration at BJP office
Published on

ಮೈಸೂರು: ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ ಆಚರಿಸಲಾಯಿತು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಶಂಕರಾಚಾರ್ಯರು 1236 ವರ್ಷಗಳ ಹಿಂದೆ ಜನಿಸಿ ಹಿಂದು ಧರ್ಮದ ಉಳಿವಿಗಾಗಿ ಭಾರತವನ್ನು ಕಾಲ್ನಡಿಗೆಯಲ್ಲಿ 3 ಬಾರಿ ಪರ್ಯಟನೆ ಮಾಡಿ 4 ಪೀಠಗಳನ್ನು ಸ್ಥಾಪಿಸಿದರು. ಹಿಂದು ಧರ್ಮವನ್ನು ಪುನರತ್ಥಾನಗೊಳಿಸಿದ ಶಂಕರಾಚಾರ್ಯ ಹಾಗೂ ಸಾಮಾಜಿಕ ಸಾಮರಸ್ಯ ಸಂದೇಶ ಸಾರಿದ ರಾಮಾನುಜಾಚಾರ್ಯರ ಸಿದ್ಧಾಂತಗಳು ಹಿಂದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ಶಂಕರಾಚಾರ್ಯರು ಕೇವಲ 32 ವರ್ಷಗಳ ಕಾಲ ಬದುಕಿದ್ದರೂ ಹಿಂದು ಧರ್ಮವನ್ನು ದೇಶದೆಲ್ಲಡೆ ಪ್ರಜ್ವಲಿಸುವಂತೆ ಮಾಡಿದರು. ಅವರ ತತ್ವಗಳು ಯುವ ಮನಸ್ಸುಗಳನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಈ ಸಂದರ್ಭ ಮೈಲ್ಯಾಕ್ ಅಧ್ಯಕ್ಷ ಎನ್.ವಿ. ಫಣೀಶ್, ಮಾಜಿ ಮೇಯರ್ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ. ಗಿರಿಧರ್, ಕೇಬಲ್ ಮಹೇಶ್, ಗೋಪಾಲ್ ರಾವ್, ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಬಿ.ವಿ.ಮಂಜುನಾಥ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net