ಉತ್ತರಾದಿ ಮಠದಲ್ಲಿ ಶಂಕರ ಜಯಂತಿ

Trek to Srishaila from 12
Invitation to a poetry competition
Published on

ಬಸವನ ಬಾಗೇವಾಡಿ: ವಿಪ್ರ ಸಮಾಜ ವತಿಯಿಂದ ಪಟ್ಟಣದ ಉತ್ತರಾದಿ ಮಠದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಶುಕ್ರವಾರ ಆಚರಿಸಲಾಯಿತು.

ಬೆಳಗ್ಗೆ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಶಂಕರಾಚಾರ್ಯ ಭಾವಚಿಂತ್ರದೊಂದಿಗೆ ಪಲ್ಲಕಿ ಮೆರವಣಿಗೆ ನಡೆಸಲಾಯಿತು.

ನಂತರ ಮಠದಲ್ಲಿ ನಡೆದ ಸಭೆಯಲ್ಲಿ ಅರವಿಂದಾಚಾರ್ಯ ಜೋಶಿ ಮಾತನಾಡಿ, ಪ್ರಾಪರಂಪರೆಯಲ್ಲಿ ಶಿಖರ ಪ್ರಾಯರಾದವರು ಶಂಕರಾಚಾರ್ಯರು. ಹಿಂದು ಸಂಸತಿ ಅಪಾಯದ ಅಂಚಿನಲ್ಲಿದ್ದಾಗ ಪುನರುದ್ಧಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಶಿಕ ಜಿ.ವಿ. ಕುಲಕರ್ಣಿ ಮಾತನಾಡಿ, ಶಂಕರಾಚಾರ್ಯರು ಹಿಂದು ಸಮಾಜಕ್ಕೆ ಹೊಸ ಮಾರ್ಗ ತೋರಿಸಿದರು. ಹಿಂದು ಮನಸ್ಸುಗಳನ್ನು ಒಂದು ಗೂಡಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದರು. ಬಡಾವಣೆ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net