ನಾಲ್ಕು ದಿಕ್ಕಿನಲ್ಲಿ ಮಠ ಸ್ಥಾಪಿಸಿದ ಶಂಕರರು

03 SARAG 1
ಸರಗೂರು ತಾಲೂಕಿನ ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಸರಳವಾಗಿ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.
Published on

 ಸರಗೂರು: ದ್ವಾರಕಾ, ಕಾಶ್ಮೀರ, ಶೃಂಗೇರಿ ಮತ್ತು ಪುರಿಯಲ್ಲಿ ನೆಲೆಗೊಂಡಿರುವ ಪ್ರಮುಖ ಮಠಗಳನ್ನು ನಿರ್ಮಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ತಾಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಕೆ.ವಿ.ಭಾಸ್ಕರ್ ಹೇಳಿದರು.

ಸರಗೂರು ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶ್ರೀಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಶಂಕರಾಚಾರ್ಯರು ಮಹಾನ್ ದಾರ್ಶನಿಕ. ಮಹಾನ್ ಕವಿಯೂ ಆಗಿದ್ದರು. ಸೌಂದರ್ಯ ಲಹರಿ, ನಿರ್ವಾಣ ಶಾಲ್ಕಂ ಮತ್ತು ಶಿವಾನಂದ ಲಹರಿ ಅವರ ಗಮನಾರ್ಹ ಸಂಯೋಜನೆಗಳಾಗಿವೆ. ಆದಿಶಂಕರರು ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರಗಳ ಬಗ್ಗೆ ತಮ್ಮ ವ್ಯಾಖ್ಯಾನ ಬರೆದಿದ್ದಾರೆ ಎಂದರು.

ಶಂಕರಾಚಾರ್ಯರು ಹಿಂದು ಧರ್ಮವನ್ನು ಪ್ರಚಾರ ಮಾಡಲು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಉತ್ತರದಲ್ಲಿ ಬದರಿಕಾಶ್ರಮದ ಜ್ಯೋತಿರ್ಮಠ, ಪಶ್ಚಿಮದಲ್ಲಿ ದ್ವಾರಕಾದಲ್ಲಿರುವ ಶಾರದಾ ಮಠ, ಪೂರ್ವದಲ್ಲಿ ಜಗನ್ನಾಥಪುರಿಯಲ್ಲಿರುವ ಗೋವರ್ಧನ ಮಠ ಮತ್ತು ದಕ್ಷಿಣದಲ್ಲಿ ಶೃಂಗೇರಿ ಮಠಗಳು ಆದಿ ಶಂಕರಾಚಾರ್ಯರು ನೀಡಿರುವ ಕೊಡುಗೆ ಎಂದು ಹೇಳಿದರು.

ಲಕ್ಷ್ಮೀನರಸಿಂಹಸ್ವಾಮಿ ದೇಗುಲ ಅರ್ಚಕ ಕಸ್ತೂರಿ ರಂಗನ್ ಮಾತನಾಡಿದರು. ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಸದಸ್ಯರಾದ ನೂರಾಳು ಸ್ವಾಮಿ, ಉಮಾ ರಾಮಚಂದ್ರ, ಕಸಾಪ ತಾಲೂಕು ಅಧ್ಯಕ್ಷ ಕೆಂಡ ಗಣ್ಣಸ್ವಾಮಿ, ಮುಖಂಡರಾದ ಗುರುಪ್ರಸಾದ್, ಶಶಿಧರ, ಗೋಪಿನಾಥ್, ಶಾಂಭಮೂರ್ತಿ, ನಾರಾಯಣ್, ಶ್ರೀವತ್ಸ, ವೈ.ಡಿ.ರಾಜಣ್ಣ, ರವಿಚಂದ್ರನ್, ಮುಜೀಬ್ ಶ್ರೀನಿವಾಸ, ಷರಿಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net