ಹುಬ್ಬಳ್ಳಿ: ಇಲ್ಲಿಯ ನವನಗರದ ಶಿವರಾತ್ರಿ ಜಾಗರಣೋತ್ಸವ ಸಮಿತಿ ವತಿಯಿಂದ ಮೇ 18ರಂದು ಶ್ರೀಶಂಕರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 7ಕ್ಕೆ ವಿಶ್ವೇಶ್ವರ ದೇವತಾ ಸಹಿತ ಶಂಕರ ಭಗವತ್ಪಾದರಿಗೆ ಅಭಿಷೇಕ, 11ಗಂಟೆಗೆ ಗಿರಿಜಾ ಭಜನಾ ಮಂಡಳಿಯಿಂದ ಭಜನೆ, 11-.30ಕ್ಕೆ ಡಾ. ಮಹೇಶ ಹಂಪಿಹೊಳಿ ಇವರಿಂದ ಪ್ರವಚನ ಹಾಗೂ ನಂತರದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಭಕ್ತರು ಪಾಲ್ಗೊಳ್ಳಬೇಕೆಂದು ಸಮಿತಿ ಅಧ್ಯಕ್ಷ ಮಾರ್ತಾಂಡ ನಾಡಿಗೇರ ಕೋರಿದ್ದಾರೆ.