

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾತಂತ್ರೃ ನಂತರ ಭಾಷಾವಾರು ರಾಜ್ಯಗಳ ಉದಯಕ್ಕೆ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದ್ದಾಗ ಅದರಗುಂಚಿ ಶಂಕರಗೌಡರು ತಮ್ಮ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಮೈಸೂರು ರಾಜ್ಯ ಮತ್ತು ಭಾಷಾವಾರು ರಾಜ್ಯಗಳ ಉದಯಕ್ಕೆ ಕಾರಣೀಭೂತರಾದರು ಎಂದು ವರೂರಿನ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.
ಹುಬ್ಬಳ್ಳಿಯ ಎಜಿಎಂಆರ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ಏಕೀಕರಣ ರೂವಾರಿ ಅದರಗುಂಚಿ ಶಂಕರಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಗದಿಗಯ್ಯ ಹಿರೇಮಠ ಮಾತನಾಡಿ, ನಾಡು ಕಂಡ ಅಪರೂಪದ ವ್ಯಕ್ತಿ, ಹುಬ್ಬಳ್ಳಿ ಗಾಂಧಿ ಎಂದೇ ಪ್ರಖ್ಯಾತರಾಗಿ ಸ್ವಾತಂತ್ರೃ ಸೇನಾನಿಯಾಗಿ ತಮ್ಮ ಜೀವನವನ್ನೇ ಭಾರತ ಮಾತೆಗೆ ಮತ್ತು ಕನ್ನಡ ತಾಯಿಗೆ ಮುಡುಪಿಟ್ಟು ಹೋರಾಡಿದವರು ಅದರಗುಂಚಿ ಶಂಕರಗೌಡರು ಎಂದರು.
ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡರ ಅಧ್ಯಕ್ಷತೆ ವಹಿಸಿದ್ದರು. ಸಂದೀಪ್ ಖ್ಯಾತನವರ, ಮಹೇಶಗೌಡ ಪಾಟೀಲ, ದೇವೇಂದ್ರಪ್ಪ ಕಾಗೆನವರ, ಭಗವಂತಪ್ಪ ವೆಂಕಣ್ಣವರ, ಚಂದ್ರಪ್ಪ ಬೆಣ್ಣಿ, ನಾಗನಗೌಡ ಸಿದ್ದನಗೌಡ, ಚಂದ್ರಕಾಂತ ಮಿಸ್ಕಿನ, ಗಂಗಾಂಬಿಕ, ಡಾ. ರಾಮು ಮೂಲಗಿ, ಇತರರು ಇದ್ದರು.
ವಿದ್ಯಾ ನಿರೂಪಿಸಿದರು. ಬಸವರಾಜ ವಂದಿಸಿದರು.