

ಹುಬ್ಬಳ್ಳಿ: ಸ್ವಾತಂತ್ರ್ಯ ನಂತರ ಭಾಷಾವಾರು ರಾಜ್ಯಗಳ ಉದಯವಾಗಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವಾಗ ಅದರಗುಂಚಿ ಶಂಕರಗೌಡರು ತಮ್ಮ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಇದರ ಫಲವಾಗಿ ಮೈಸೂರು ರಾಜ್ಯ ಉದಯವಾಗಲು ಮತ್ತು ಭಾಷಾವಾರು ರಾಜ್ಯಗಳ ಉಗಮಕ್ಕೆ ಕಾರಣೀಭೂತರಾದರು ಎಂದು ವರೂರು ಕ್ಷೇತ್ರದ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.
ತಾಲೂಕಿನ ವರೂರಿನ ಎಜಿಎಂಆರ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜ್‌ನಲ್ಲಿ ಮಂಗಳವಾರ ಕರ್ನಾಟಕ ವಿದ್ಯಾವರ್ಧಕ ಸಂಘ ಏರ್ಪಡಿಸಿದ್ದ ಕರ್ನಾಟಕ ಏಕೀಕರಣ ರೂವಾರಿ ಅದರಗುಂಚಿ ಶಂಕರಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಸ್ವಾರ್ಥಕ್ಕಾಗಿ ಬದುಕದೇ ಸಮಾಜಕ್ಕಾಗಿ ದುಡಿಯಬೇಕು ಎಂದರು
ಹಿರಿಯ ರಂಗಕರ್ಮಿ ಗದಿಗಯ್ಯ ಹಿರೇಮಠ ಮಾತನಾಡಿ, ಅದರಗುಂಚಿ ಶಂಕರಗೌಡರು ತಮ್ಮ ಜೀವನವನ್ನೇ ಭಾರತ ಮಾತೆ ಮತ್ತು ಕನ್ನಡ ತಾಯಿಗೆ ಮುಡುಪಿಟ್ಟು ಹೋರಾಡಿದರು ಎಂದರು.
ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡರ ಅಧ್ಯಕ್ಷತೆ ವಹಿಸಿದ್ದರು.
ನಿಂಗನಗೌಡ ಮರಿಗೌಡರು, ಶ್ರೀ ಗುಣಧರನಂದಿ ಮಹಾರಾಜರು, ಗಿರಿಜಮ್ಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು
ಪ್ರಾಚಾರ್ಯ ಸಂದೀಪ್ ಖ್ಯಾತನವರ, ಮಹೇಶಗೌಡ ಪಾಟೀಲ, ದೇವೇಂದ್ರಪ್ಪ ಕಾಗೆನವರ್, ಭಗವಂತಪ್ಪ ವೆಂಕಣ್ಣವರ್, ಚಂದ್ರಪ್ಪ ಬೆಣ್ಣಿ, ನಾಗನಗೌಡ ಸಿದ್ದನಗೌಡ, ಚಂದ್ರಕಾಂತ್ ಮಿಸ್ಕಿನ್, ದತ್ತಿ ದಾನಿ ಡಾ. ರಾಮು ಮೂಲಗಿ ಉಪಸ್ಥಿತರಿದ್ದರು.