ಶನೈಶ್ಚರ, ಮಹದೇಶ್ವರ ದೇವರ ಉತ್ಸವ

1000094260
ಪಿರಿಯಾಪಟ್ಟಣ ತಾಲೂಕು ಅರೇನಹಳ್ಳಿ ಗ್ರಾಮದ ದೀಪಾವಳಿ ಹಬ್ಬದ ಪ್ರಯುಕ್ತ ಅಲಂಕಾರಗೊಂಡ ಶ್ರೀ ಶನೈಶ್ಚರ ಸ್ವಾಮಿ ಮತ್ತು ಮಲೆ ಮಹದೇಶ್ವರ ಉತ್ಸವ ಮೂರ್ತಿಗಳು ಗಮನ ಸೆಳೆದವು.
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ಅರೇನಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶನೈಶ್ಚರ ಹಾಗೂ ಮಹದೇಶ್ವರ ದೇವರ ಉತ್ಸವಗಳು ಅದ್ದೂರಿಯಾಗಿ ನಡೆದವು. ಗ್ರಾಮದ ಹರಳಯ್ಯನ ಮಠದ ಬಳಿಯಿರುವ ಕೆರೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ತದನಂತರ ಹೂವಿನ ಅಲಂಕಾರಗೊಂಡ ಮಂಟಪದಲ್ಲಿ ಉತ್ಸವಮೂರ್ತಿ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಭಕ್ತಾದಿಗಳಿಗೆ ದೇವಾಲಯದ ಅರ್ಚಕರಾದ ಸ್ವಾಮಿ ಅವರಿಂದ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net