

ಮಾಲಂಬಿ ದಿನೇಶ್ ಶನಿವಾರಸಂತೆ
ಕೋವಿಡ್-೧೯ ಮಹಾಮಾರಿಗೆ ಪ್ರತಿಯೊಬ್ಬರು ತಮ್ಮ ಜೀವನ ಸಾಗಿಸಲು ಅತೀವ ಕಷ್ಟ ಪಡುತ್ತಿದ್ದರು. ಪ್ರತಿಯೊಂದು ಕಾಯಕ ವೃತ್ತಿ ಮಾಡುವ ಕುಟುಂಬ ಒಪ್ಪತ್ತು ಊಟಕ್ಕೂ ಪರದಾಡುತ್ತಿದ್ದರು. ಈಗ ಕೋವಿಡ್ ಪಿಡುಗಿನಿಂದ ಮುಕ್ತಿ ಸಿಕ್ಕಿದ್ದರೂ, ಕೆಲವು ಕಾಯಕ ಸಮಾಜ ದವರು ಸಂಕಷ್ಟದಿಂದ ಪಾರಾಗಿಲ್ಲ.
ಸವಿತಾ ಸಮಾಜ ಈಗಲೂ ಸಂಕಷ್ಟ ಎದುರಿಸುತ್ತಿದ್ದಾರೆ. ಸೆಲೂನ್ ಅಂಗಡಿಗಳಿಗೆ ಗ್ರಾಹಕರು ಬಾರದ ಹಿನ್ನೆಲೆಯಲ್ಲಿ ಮಾಲೀಕರು ಹಾಗೂ ಸಹಾಯಕರು ಅನಿವಾರ್ಯವಾಗಿ ಗಾರೆ ಕೆಲಸ, ಟಿಂಬರ್ ಕೆಲಸ ಸೇರಿದ್ದಂತೆ ಇತರೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಸವಿತಾ ಸಮಾಜದ ಮೂಲ ಕಸುಬು ಸೆಲೂನ್ ಅಂಗಡಿ. ಇಲ್ಲಿಗೆ ತಲೆ ಕೂದಲು, ಮೀಸೆ, ಗಡ್ಡ ತೆಗೆಸಲು ಗ್ರಾಹಕರು ಬರುತ್ತಾರೆ. ಈ ಗ್ರಾಹಕರನ್ನು ನಂಬಿ ಸೆಲೂನ್ ಅಂಗಡಿ ತೆರೆದ ಮಾಲೀಕ ಮತ್ತು ಆತನ ಸಹಾಯಕರು ಜೀವನ ಸಾಗಿಸುತ್ತಾರೆ.
ಕೋವಿಡ್-೧೯ ಪಿಡುಗೆಗೆ ಇಡೀ ವಿಶ್ವ ತತ್ತರಿಸಿತು. ಲಾಕ್‌ಡೌನ್ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಸೆಲೂನ್ ಅಂಗಡಿಗಳು ತೆರೆಯ ಲಿಲ್ಲ. ಲಾಕ್‌ಡೌನ್ ತೆರವುಗೊಳಿಸಿದ್ದ ಸಂದರ್ಭದಲ್ಲೂ ಸೆಲೂನ್ ಅಂಗಡಿಗಳಿಗೆ ಮಾರ್ಗಸೂಚಿ ಇದ್ದ ಕಾರಣ ಗ್ರಾಹಕರು ತಮ್ಮ ಮನೆಗಳಲ್ಲಿ ತಾವೆ ಶೇವಿಂಗ್ ಮಾಡಿಕೊಳ್ಳುತ್ತಿದ್ದರು. ಯುವಕರು ತಲೆ ಕೂದಲು, ಗಡ್ಡ, ಮೀಸೆ ಕತ್ತರಿಸಲು ಟಿಮ್ಮರ್ ಬಳಸುತ್ತಿರುವ ಪರಿಣಾಮ ಸೆಲೂನ್ ಅಂಗಡಿಗಳಿಗೆ ಗ್ರಾಹಕರು ಬಾರಾದೆ ಪರ್ಯಾಯ ಕೆಲಸಗಳತ್ತ ಗಮನ ಹರಿಸುವಂತಾಗಿದೆ.
**
ಕೋವಿಡ್ ಪಿಡುಗಿನಿಂದ ಜನರು ಪಾರಾಗಿದ್ದರೂ, ಸವಿತಾ ಸಮಾಜ ಪಾರಾಗಿಲ್ಲ, ಈಗಲೂ ಸೆಲೂನ್‌ಗೆ ಗ್ರಾಹಕರು ಮೊದಲಿನ ಹಾಗೆ ಬರುತ್ತಿ
ಲ್ಲ ಇದರಿಂದ ನಮ್ಮ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸವಿತಾ ಸಮಾಜ ಸಂಕಷ್ಟ ಪರಿಹಾರಕ್ಕೆ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು. ಪ್ರಕಾಶ್, ಒಲಿಂಪಿಕ್ ಹೇರ್ ಡ್ರೆಸೆಸ್, ಶನಿವಾರಸಂತೆ.
**
ಕರೊನಾ ಸಂದರ್ಭ ಸರ್ಕಾರದ ಆದೇಶದಂತೆ ನಾವು ಸೆಲೂನ್ ಅಂಗಡಿ ಮುಚ್ಚಿದ್ದೇವು. ಗ್ರಾಹಕರು ಮನೆಗಳಲ್ಲಿ ತಾವೆ ಶೇಂಗ್ ಮಾಡಿ ಕೊಳ್ಳುತ್ತಿದ್ದರು. ಯುವಕರು ತಲೆ ಕೂದಲುಗಳನ್ನು ತಾವೆ ಮನೆಯಲ್ಲಿ ಟಿಮ್ಮರ್ ಮಾಡಿಕೊಳ್ಳುತ್ತಿದ್ದರೂ, ಈಗಲೂ ಬಹುತೇಕ ಗ್ರಾಹಕರು ಮನೆಗಳಲ್ಲಿ ತಾವೆ ಶೇವಿಂಗ್ ಮಾಡಿಕೊಳ್ಳುತ್ತಿದ್ದಾರೆ. ಸೆಲೂನ್ ಅಂಗಡಿಗೆ ಬರುವುದು ಕಮ್ಮಿಯಾಗಿದೆ. ಇದರಿಂದ ಜೀವನ ನಡೆಸಲೂ ಕಷ್ಟವಾಗುತ್ತಿದೆ. ರಾಮಕೃಷ್ಣ, ಕೃಷ್ಣ ಹೇರ್ ಡ್ರೆಸೆಸ್, ಶನಿವಾರಸಂತೆ.
**
ಬಹುತೇಕ ಯುವಕರು ಗಡ್ಡ, ಮೀಸೆ ಬಿಡುವುದು, ತಲೆ ಕೂದಲು ಬೆಳೆಯಲು ಬಿಡುವುದು ಫ್ಯಾಷನ್ ಆಗುತ್ತಿದೆ. ಕೆಲವು ಯುವಕರು ಟಿಮ್ಮರ್ ಬಳಸಿ, ಮನೆಗಳಲ್ಲಿ ಶೇವಿಂಗ್ ಮಾಡುತ್ತಿರುವ ಇಂದಿನ ದಿನದಲ್ಲಿ ಸೆಲೂನ್ ಅಂಗಡಿಗಳಿಗೆ ಯುವ ಗ್ರಾಹಕರು ಬರುತ್ತಿಲ್ಲ. ಇದು ನಮಗೆ ತುಂಬಾ ಸಂಕಷ್ಟ ತಂದಿದೆ. ರಾಜೇಶ್, ಸ್ಟಾರ್ ಹೇರ್ ಡ್ರೆಸೆಸ್, ಶನಿವಾರಸಂತೆ.
**
ನಮ್ಮ ಸೆಲೂನ್ ಅಂಗಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದರೂ ಆಗ ನಾವು ನಮ್ಮ ಸೆಲೂನ್ ಅಂಗಡಿಗೆ ಸಹಾಯಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದೇವು. ಕರೊನಾ ಬಂದ ನಂತರ ನಾವು ಸೆಲೂನ್ ಅಂಗಡಿ ಬಂದ್ ಮಾಡಿ, ಕೂಲಿ ಕೆಲಸಕ್ಕೆ ಹೋಗುತ್ತಿದ್ದೇವು. ಈಗಲೂ ನಮ್ಮ ಸೆಲೂನ್ ಅಂಗಡಿಗೆ ಗ್ರಾಹಕರು ಬರುವುದು ಕಮ್ಮಿಯಾಗಿದೆ. ಸಹಾಯಕರು ಗಾರೆ, ಟಿಂಬರ್ ಮುಂತಾದ ಕೆಲಸಕ್ಕೆ ಹೋಗುತ್ತಿದ್ದಾರೆ. ಕುಮಾರ್, ಅಲಂಕಾರ್ ಹೇರ್ ಡ್ರೆಸೆಸ್, ಗುಡುಗಳಲೆ.
**
ಸೆಲೂನ್ ಅಂಗಡಿಗಳಿಗೆ ಗ್ರಾಹಕರು ಬರುವುದು ಕ್ಮುಯಾಗುತ್ತಿರುವ ನಿಟ್ಟಿನಲ್ಲಿ ನಾವು ಬೇರೆ ಕೆಲಸಗಳಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ ಒಂದು ವೇಳೆ ಸ್ವಂತ ಸೆಲೂನ್ ಅಂಗಡಿ ತೆರೆದರೂ ಅಂಗಡಿ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಇದರಿಂದ ಸತಾ ಸಮಾಜದ ಕಸುಬುದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಲೋಕೇಶ್, ಶನಿವಾರಸಂತೆ.
**
ಕರೊನಾ ಬಂದ ಮೇಲೆ ಸೆಲೂನ್ ಅಂಗಡಿ ಮಾಲೀಕರಿಗೆ ಮತ್ತು ಸಹಾಯಕರಿಗೆ ಸಂಕಷ್ಟ ಶುರುವಾಗಿದೆ. ಈಗಲೂ ನಾವು ನಾನಾ ರೀತಿಯ ಸಂಕಷ್ಟ ಎದುರಿಸುತ್ತಿದ್ದೇವೆ. ಸರ್ಕಾರ ಸಂಕಷ್ಟದಲ್ಲಿರುವ ಸವಿತಾ ಸಮಾಜದ ಪ್ರಗತಿಗೆ ವಿಶೇಷ ಯೋಜನೆ ರೂಪಿಸಬೇಕಿದೆ. ದಿವಾಕರ್, ಸ್ಟಾರ್ ಹೇರ್ ಡ್ರೆಸೆಸ್, ಶನಿವಾರಸಂತೆ.
**
ಮುಂಚಿನಿಂದಲೂ ಸವಿತಾ ಸಮಾಜ ಸಂಕಷ್ಟದ್ದು, ಕೋವಿಡ್ ಬಂದ ಮೇಲೆ ಅಂತೂ ಸವಿತಾ ಸಮಾಜದವರು ತಮ್ಮ ಕುಟುಂಬವನ್ನು ಸಾಕಲು ತುಂಬಾ ಕಷ್ಟ ಪಡುವಂತಾಗಿದೆ. ಸೆಲೂನ್ ಅಂಗಡಿ ಬಂದ್ ಮಾಡಿ ಬೇರೆ ಕೆಲಸಕ್ಕೆ ಹೋಗುವ ಅನಿವಾರ‌್ಯತೆ ಎದುರಾಗುತ್ತಿದೆ. ಯೋಗೇಶ್, ಸೌಂದರ್ಯ ಹೇರ್ ಡ್ರೆಸೆಸ್, ಗುಡುಗಳಲೆ.