ಕಂತೇನಹಳ್ಳಿಯಲ್ಲಿ ಶನೈಶ್ಚರ ಜಯಂತಿ

1000941284
Published on

ಅರಸೀಕೆರೆ ಗ್ರಾಮಾಂತರ: ನಗರದ ಹೊರವಲಯ ಕಂತೇನಹಳ್ಳಿಯ ದೇವಾಲಯದಲ್ಲಿ ಮುರಳಿ ಪ್ರತಿಷ್ಠಾನ ವತಿಯಿಂದ ಮಂಗಳವಾರ ಶ್ರೀ ಶನೈಶ್ಚರ ಸ್ವಾಮಿ ಜಯಂತಿಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಸ್ವಾಮಿಗೆ ಅಭಿಷೇಕ, ನವಗ್ರಹ ಪೂಜೆ, ನವಗ್ರಹ ಹೋಮ, ಸುದರ್ಶನ ಹೋಮ ಸೇರಿದಂತೆ ಇತರ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು .ಬೆಳಗ್ಗಿನಿಂದಲೇ ಭಕ್ತರು ದೇವರ ದರ್ಶನ ಪಡೆದರು. ದೇಗುಲ ಆವರಣದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net