ಮೊಳೆಕೊಪ್ಪಲು ಗ್ರಾಮದಲ್ಲಿ ಶನೇಶ್ಚರಸ್ವಾಮಿ ಜಾತ್ರೆ ಸಂಪನ್ನ: ಸಾವಿರಾರೂ ಜನರಿಗೆ ಅನ್ನದಾಸೋಹ

Shaneshcharaswami festival in Molekoppalu village Mandya
Published on

ಮಂಡ್ಯ: ತಾಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿ ಶನೇಶ್ಚರಸ್ವಾಮಿಯ 24ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.

ಜಾತ್ರೆ ಅಂಗವಾಗಿ ಶನೇಶ್ಚರಸ್ವಾಮಿ ಹಾಗೂ ಎತ್ಕಲ್ ಮಾರಮ್ಮ ದೇವಿಗೆ ನವಗ್ರಹ ಪೂಜೆ, ಹೋಮ, ಅಭಿಷೇಕ, ವಸಧಾರಣೆ ಹಾಗೂ ಮಂಗಳಾರತಿ ಸೇರಿದಂತೆ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು. ಅಂತೆಯೇ ಎರಡು ದೇವರ ಉತ್ಸವ ಗ್ರಾಮದ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಈ ವೇಳೆ ಮಹಿಳೆಯರು ತಂಬಿಟ್ಟಿನ ಆರತಿ ಹೊತ್ತು ಉತ್ಸವದಲ್ಲಿ ಪಾಲ್ಗೊಂಡರು.

ಮೊಳೆಕೊಪ್ಪಲು, ಬಸರಾಳು, ಕಂಬದಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ದೇವರ ದರ್ಶನ ಪಡೆದರು. ಮುಖ್ಯ ಅರ್ಚಕ ನಂಜುಂಡಸ್ವಾಮಿ ಆಶೀರ್ವಚನ ನೀಡಿದರು. ಸಂಜೆ ಎರಡು ಸಾವಿರಕ್ಕೂ ಹೆಚ್ಚು ಜನರು ಅನ್ನದಾಸೋಹದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net