ಶನೈಶ್ಚರ ಸ್ವಾಮಿಯ ವಿಜೃಂಭಣೆಯ ಉತ್ಸವ

17 ckm 8
ಚಿಕ್ಕಮಗಳೂರು ಹೊರವಲಯದ ಅಲ್ಲಂಪುರದಲ್ಲಿ ಶ್ರೀ ಶನೈಶ್ಚರ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಚಿಕ್ಕಮಗಳೂರು: ಅಲ್ಲಂಪುರ ಕ್ಷೇತ್ರದ ಶನೈಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವ ಅಂಗವಾಗಿ ಶನಿವಾರ ಬೆಳಿಗ್ಗೆ ಶನೈಶ್ಚರ ಕಳಸ ಮತ್ತು ಸವಾರಿ ನಡೆನುಡಿ ಮೇಲೆ ಬಂದು ಸ್ವಾಮಿಯವರ ಕೆಂಡಾರ್ಚನೆ ನೆಡೆಯಿತು. ಮಧ್ಯಾಹ್ನ 1 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾಧ್ಯದೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.

ಸುತ್ತಮುತ್ತಲ ಗ್ರಾಮಸ್ಥರಾದ ಅಲ್ಲಂಪುರ, ಕೈಮರ, ಚಿಕ್ಕಮಗಳೂರು, ಮಲ್ಲೇನಹಳ್ಳಿ, ಬೀಕನಹಳ್ಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಮೆರವಣಿಗೆಯಲ್ಲಿ ಪ್ರಧಾನ ಅರ್ಚಕರಾದ ಅನಂತು, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಸಚಿವ ಸಿ.ಟಿ.ರವಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಲೋಕೇಶ್, ಗೌರವ ಅಧ್ಯಕ್ಷರಾದ ಬಸಪ್ಪಶೆಟ್ಟಿ, ಉಪಾಧ್ಯಕ್ಷರಾದ ಯು.ಪಿ.ನಾಗರಾಜ್, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ತಿಮ್ಮಯ್ಯ, ಸಂಚಾಲಕ ಪರಮೇಶ್, ಅಮರ್‌ನಾಥ್, ಎ.ಟಿ.ಲೋಕೇಶ್, ಮಂಜುನಾಥ್, ಮೋಹನ್‌ಕುಮಾರ್, ಎ.ಎನ್.ಬಸವರಾಜ್ ಚಲವಾದಿ ಪಾಲ್ಗೊಂಡಿದ್ದರು. ಬಂದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net