

ಗೋಣಿಕೊಪ್ಪಲು: ಸಿಂಗಾಪುರ್ ಮಲೇಷ್ಯಾದಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ಗ್ಲೋಬಲ್ ಯೂನಿವರ್ಸ್-2025 ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಅಪ್ಪಂಡೇರಂಡ ಶಾಮ್ಲಿ ಉತ್ತಯ್ಯ ಮಿಸೆಸ್ ಗ್ಲೋಬಲ್ ಯೂನಿವರ್ಸ್ ಟೂರಿಸಂ-2025 ಆಗಿ ಹೊರಹೊಮ್ಮಿದ್ದಾರೆ.
ಈ ಹಿಂದೆ ಡಿಸೆಂಬರ್ 2024ರಲ್ಲಿ ಬೆಂಗಳೂರಿನ ಲಲಿತ್ ಅಶೋಕ್ ಪಂಚತಾರಾ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ರೋಲ್ ಮಾಡೆಲ್ 2024 ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಿಸೆಸ್ ಇಂಡಿಯ ರೋಲ್ ಮಾಡೆಲ್ 2024 ಬಿರುದಿನ ಜತೆಗೆ ಮಿಸೆಸ್ ಕೂರ್ಗ್ ಸ್ಕಾಟ್‌ಲ್ಯಾಂಡ್ ಕ್ವೀನ್ ಆಗಿ ಹೊರಹೊಮ್ಮಿದ್ದರು. ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್ ಗ್ಲೋಬಲ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಕಂಡಂಗಾಲ ಮೂಲದ ಕೈಕೇರಿ ನಿವಾಸಿ ಅಪ್ಪಂಡರಂಡ ನಿತಿನ್ ತಿಮ್ಮಯ್ಯ ಅವರ ಪತ್ನಿ ಹಾಗೂ ಸುಳ್ಳಿಮಾಡ ಪೌತಿ ಉತ್ತಯ್ಯ ಹಾಗೂ ಬೋಜಮ್ಮ ದಂಪತಿ ಪುತ್ರಿ.