ಶಾಮಿಯಾನಾ, ಡೆಕೊರೇಟರ್ಸ್‌ ಮಾಲೀಕರು, ಕಾರ್ಮಿಕರಿಗೆ ಅನುದಾನ, ಆರ್ಥಿಕ ನೆರವು ನೀಡಿ ; ಎಸಿಗೆ ಮನವಿ

270420 Lingausguru Workers Appeal AC
Published on

ಲಿಂಗಸುಗೂರು: ಲಾಕ್‌ಡೌನ್ ಜಾರಿಯಿಂದ ಶಾಮಿಯಾನಾ, ಡೆಕೊರೇಟರ್ಸ್‌, ಧ್ವನಿ ಮತ್ತು ಬೆಳಕಿನ ಸೇವೆ ನೀಡುವ ಅಂಗಡಿ ಮಾಲೀಕರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಅಗತ್ಯ ನೆರವು ಕಲ್ಪಿಸುವಂತೆ ಕ್ಷೇಮಾಭಿವೃದ್ಧಿ ಸಂಘ ಎಸಿ ಕಚೇರಿ ಸಿಬ್ಬಂದಿ ಅಮರೇಶಗೆ ಸೋಮವಾರ ಮನವಿ ಸಲಿಸಿತು.

ತಾಲೂಕಿನಲ್ಲಿ 60 ಕ್ಕೂ ಅಧಿಕ ಅಂಗಡಿಗಳಿದ್ದು, 300ಕ್ಕೂ ಹೆಚ್ಚು ಕಾರ್ಮಿಕರು ಇದೇ ವೃತ್ತಿ ಅವಲಂಬಿತರಾಗಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮದುವೆ, ಮುಂಜಿ, ಶುಭ ಕಾರ್ಯಗಳ ಸಮಾರಂಭ ನಡೆಯುವ ತಿಂಗಳಾಗಿದ್ದವು. ಕೋವಿಡ್-19 ಮಹಾಮಾರಿಯಿಂದಾಗಿ ಎಲ್ಲ ಕಾರ್ಯಕ್ರಮಗಳು ರದ್ದಾಗಿದ್ದು, ಉದ್ಯೋಗವಿಲ್ಲದೆ ಕಾರ್ಮಿಕರು ಕೆಲಸದಿಂದ ವಂಚಿತರಾಗಿದ್ದಾರೆ. ಕರೊನಾ ನಿಗ್ರಹಿಸಲು ಧ್ವನಿವರ್ಧಕ, ಬ್ಯಾರಿಕೇಡ್ ಇತರೆ ಉಪಯೋಗಿ ಸಾಮಾನುಗಳನ್ನು ಸಂಘ ಉಚಿತವಾಗಿ ನೀಡುತ್ತ ಅಳಿಲು ಸೇವೆ ಸಲ್ಲಿಸುತ್ತಿದ್ದು, ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಶ್ರೀಧರ ಕಿರಗಿ, ಮುಖಂಡರಾದ ಹನುಮಂತರಾವ್, ವೀರಭದ್ರಯ್ಯ ಹಿರೇಮಠ, ವೀರೇಶ ಮಜ್ಜಗಿ, ಶಫೀಕ್ ಅಹ್ಮದ್, ಪ್ರಕಾಶ ಸುಂಕದ, ಬಸವರಾಜ ಸಜ್ಜನ್, ಮಹಿಬೂಬಸಾಬ, ಅಮರೇಶ ಹಿರೇಮಠ, ನಾಗಮಲ್ಲೇಶ್ವರರಾವ್, ಅಮರೇಶ ಭೋಗಾಪುರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net