ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲದೆ ಅವಮಾನ

ಗಂಗಾವತಿ ಸಿಡಿಪಿಒ ಕಚೆರಿಯಲ್ಲಿ ನಡೆಯುತ್ತಿರುವ ವಿಮುಕ್ತ ದೇವದಾಸಿಯರ ಸಮೀಕ್ಷೆಯಲ್ಲಿ ವಿಮುಕ್ತ ದೇವದಾಸಿಯರಿಗೆ ಆಸನ ವ್ಯವಸ್ಥೆಯಿಲ್ಲದಿದ್ದರಿಂದ ಚಪ್ಪಲಿ ಬಿಡುವ ಸ್ಥಳದಲ್ಲಿ ಕುಳಿತಿರುವುದು.
ಗಂಗಾವತಿ ಸಿಡಿಪಿಒ ಕಚೆರಿಯಲ್ಲಿ ನಡೆಯುತ್ತಿರುವ ವಿಮುಕ್ತ ದೇವದಾಸಿಯರ ಸಮೀಕ್ಷೆಯಲ್ಲಿ ವಿಮುಕ್ತ ದೇವದಾಸಿಯರಿಗೆ ಆಸನ ವ್ಯವಸ್ಥೆಯಿಲ್ಲದಿದ್ದರಿಂದ ಚಪ್ಪಲಿ ಬಿಡುವ ಸ್ಥಳದಲ್ಲಿ ಕುಳಿತಿರುವುದು.
Published on

ಗಂಗಾವತಿ: ನಗರದ ಸಿಡಿಪಿಒ ಕಚೆರಿಯಲ್ಲಿ ನಡೆಯುತ್ತಿರುವ ವಿಮುಕ್ತ ದೇವದಾಸಿಯರ ಸಮೀಕ್ಷೆಯಲ್ಲಿ ವಿಮುಕ್ತ ದೇವದಾಸಿ ಕುಟುಂಬವನ್ನು ಹೀನಾಯ ರೀತಿಯಲ್ಲಿ ಕಾಣುತ್ತಿದ್ದು, ಚಪ್ಪಲಿ ಬಿಡುವ ಜಾಗದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ ಅವಮಾನಿಸಲಾಗಿದೆ ಎಂದು ರಾಜ್ಯ ದೇವದಾಸಿ ವಿಮೋಚನಾ ಸಂಘ ಆರೋಪಿಸಿದೆ.

ಸಿಡಿಪಿಒ ಕಚೇರಿಯಲ್ಲಿ ಸೆ.15ರಿಂದ ವಿಮುಕ್ತ ದೇವದಾಸಿಯರ ಸಮೀಕ್ಷೆ ನಡೆಯುತ್ತಿದ್ದು, ಕನಿಷ್ಟ ಸೌಲಭ್ಯಗಳಿಲ್ಲ. ಆಸನದ ವ್ಯವಸ್ಥೆ ಕೊರತೆಯಿಂದ ಚಪ್ಪಲಿ ಬಿಡುವ ಸ್ಥಳದಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಕಚೇರಿ ಸಿಬ್ಬಂದಿಗೆ ತಿಳಿದಿದ್ದರು ವ್ಯವಸ್ಥೆ ಸರಿಪಡಿಸುವಲ್ಲಿ ವಿಲರಾಗಿದ್ದಾರೆ. ಶೋಷಿತ ಮಹಿಳೆಯರಿಗೆ ಕಚೇರಿ ಸಿಬ್ಬಂದಿ ಅವಮಾನಿಸಿದ್ದಾರೆ. ಇದನ್ನು ಸಿಬ್ಬಂದಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಹುಲಿಗೆಮ್ಮ ಆರೋಪಿಸಿದ್ದಾರೆ.

ಸಿಡಿಪಿಒ ಜಯಶ್ರೀರಾಜಪುರೋಹಿತ್ ಪ್ರತಿಕ್ರಿಯೆಸಿ, ಕಚೇರಿಯಲ್ಲಿ ಸಮೀಕ್ಷೆ ನಡೆಯುತ್ತಿದ್ದು, 150 ಪ್ರಶ್ನೆಗಳಿಗೆ ಪ್ರತಿಯೊಬ್ಬರಿಂದ ಮಾಹಿತಿ ಪಡೆಯಬೇಕಿದೆ. ಮೂರು ತಲೆಮಾರಿನ ಮಾಹಿತಿ ಪಡೆಯಲು ವಿಳಂಬವಾಗುತ್ತಿದೆ. ಆಸನ, ಕುಡಿವ ನೀರು ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ಯಾರನ್ನೂ ಅವಮಾನಿಸುವ ಪ್ರಶ್ನೆಯೇ ಇಲ್ಲ. ಅಪರೇಟರ್ ಬರುವ ಮುನ್ನ ಕೆಲವರು ಬಾಗಿಲು ಬಳಿ ಕುಳಿತಿದ್ದಾರೆ ಹೊರತು, ಚಪ್ಪಲಿ ಬಿಡುವ ಜಾಗದಲ್ಲಿ ಕುಳಿತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net