ಶರಣ ಶಕ್ತಿ ಚಲನಚಿತ್ರದಿಂದ ಸಮಾಜದ ಸ್ವಾಸ್ಥೃ ಹಾಳು

Shame on Basavadi surrenderers
ಮುದ್ದೇಬಿಹಾಳದಲ್ಲಿ ಶರಣ ಸಾಹಿತ್ಯ ಪರಿಷತ್ತಿನಿಂದ ನಡೆದ ದತ್ತಿ, ಸನ್ಮಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಇಟಗಿ ಮಾತನಾಡಿದರು. ಮಹಿಬೂಬ ಗೊಳಸಂಗಿ, ಪ್ರೀತಿ ದೇಗಿನಾಳ, ವಿರೂಪಾಕ್ಷಪ್ಪ ತಡಸದ, ಪ್ರಾ. ಎಸ್.ಎನ್. ಪೋಲೇಶಿ ಇನ್ನಿತರರು ಇದ್ದಾರೆ.
Published on

ಮುದ್ದೇಬಿಹಾಳ: ಬಸವಾದಿ ಶರಣರಿಗೆ ಅವಮಾನ ಮಾಡುವ ಪ್ರಸಂಗಗಳು ನಡೆಯಬಾರದು. ಶರಣ ಶಕ್ತಿ ಚಲನಚಿತ್ರದಲ್ಲಿ ಸಮಾಜದ ಸ್ವಾಸ್ಥತ್ಯ ಕೆಡಿಸುವ ಶರಣರ ಅವಮಾನಗೊಳಿಸುವ ಹಲವು ಸನ್ನಿವೇಶಗಳಿವೆ. ಇಂಥ ಚಲನಚಿತ್ರಗಳು ಸಮಾಜದ ಏಕತೆ, ಒಗ್ಗಟ್ಟಿಗೆ ಮಾರಕವಾಗುತ್ತವೆ. ಇಂಥವುಗಳಿಗೆ ಯಾರೂ ಪ್ರೋತ್ಸಾಹ ನೀಡಬಾರದು. ಅವುಗಳ ವೀಕ್ಷಣೆ ಬಹಿಷ್ಕರಿಸಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಇಟಗಿ ಹೇಳಿದರು.

ಇಲ್ಲಿನ ಎಂಜಿವಿಸಿ ಪದವಿ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ಎಸ್‌ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂಗೈಕ್ಯ ಮಲ್ಲಮ್ಮ ಮತ್ತು ಶಂಕರಪ್ಪ ತಡಸದ ಸ್ಮರಣಾರ್ಥ ದತ್ತಿ ಕಾರ್ಯಕ್ರಮ, ಸನ್ಮಾನ ಸಮಾರಂಭದಲ್ಲಿ ಲಿಂಗಾಯತ-ತಲ್ಲಣಗಳು ವಿಷಯ ಕುರಿತು ಅವರು ಅನುಭಾವ ನಡೆಸಿಕೊಟ್ಟರು.

ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ ಅವರು ಮಾತನಾಡಿ, ಶಂಕರಪ್ಪನವರು ಮಹಾದಾನಿ ಗಂಗಮ್ಮನವರ ಪರಮಭಕ್ತರಾಗಿ ಅವರ ಹದಯ ಗೆದ್ದು ಎಸ್‌ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್ ಅಡಿ ಎಂಜಿವಿಸಿ ಹೆಸರಿನಲ್ಲಿ ಬಹತ್ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಕಾರಣರಾಗಿ ಈ ಭಾಗವನ್ನು ಶೈಕ್ಷಣಿಕವಾಗಿ ಎತ್ತರಕ್ಕೆ ಕೊಂಡೊಯ್ದ ಕೀರ್ತಿವಂತರಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂಜಿವಿಸಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಸ್.ಎನ್. ಪೋಲೇಶಿ ಮಾತನಾಡಿ, ಮಾತೋಶ್ರೀ ಗಂಗಮ್ಮನವರ ನಿಲುವಿನಂತೆ ಶಂಕ್ರಪ್ಪನವರು ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದರು. ತಮ್ಮ ಬದುಕನ್ನೇ ಶಿಕ್ಷಣದ ಬೆಳವಣಿಗೆಗೆ ಮೀಸಲಾಗಿಟ್ಟಿದ್ದರು ಎಂದರು.

ಪುರಸಭೆ ನೂತನ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರನ್ನು ಸನ್ಮಾನಿಸಲಾಯಿತು. ಡಾ. ಆರ್.ಎಚ್. ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಜಿವಿಸಿ ಟ್ರಸ್ಟ್ ಕಾರ್ಯದರ್ಶಿ ಅಶೋಕ ತಡಸದ, ವೀರಶೈವ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೀರಣ್ಣ ತಡಸದ, ಎಂಜಿವಿಸಿ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ.ಚಂದ್ರಕಾಂತ ಬಂಡರಗಲ್ ವೇದಿಕೆಯಲ್ಲಿದ್ದರು.

ವರ್ತಕ ವಿರೂಪಾಕ್ಷಪ್ಪ ತಡಸದ ಬಸವ ಭಾವಪೂಜೆ ನೆರವೇರಿಸಿದರು. ಪ್ರಿಯದರ್ಶಿನಿ ಬಸರಕೋಡ ವಚನ ಪ್ರಾರ್ಥನೆ ನಡೆಸಿದರು. ಸಾಹಿತಿ ರುದ್ರೇಶ ಕಿತ್ತೂರ ಸ್ವಾಗತಿಸಿದರು. ಡಾ. ಪ್ರಕಾಶ ನರಗುಂದ ನಿರೂಪಿಸಿದರು. ಮನೆಯಲ್ಲಿ ಮಹಾಮನೆ ಅಧ್ಯಕ್ಷ ಬಸವರಾಜ ಕೋರಿ ವಂದಿಸಿದರು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಮಹಾಮನೆ ಬಳಗ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಬಳಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net