

ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ನರಿಕೊಂಬು ಗ್ರಾ.ಪಂ ಅಧ್ಯಕ್ಷ ಸಂತೋಷ್ ಕುಮಾರ್, ಬಿರುವೆರ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಪೂಜಾರಿ, ನರಿಕೊಂಬು ಗ್ರಾ.ಪಂ ಸದಸ್ಯರಾದ ರವಿ ಅಂಚನ್, ರಂಜಿತ್ ಕೆದ್ದೇಲ್ ಭಾಗವಹಿಸಿದ್ದರು.
ಸಂಘದ ನಿರ್ದೇಶಕರಾದ ಮೋನಪ್ಪ ಪೂಜಾರಿ ಬೊಂಡಾಲ, ರಾಜೇಶ್ ಆರ್, ಅಶೋಕ್ ಆರ್, ಕೃಷ್ಣಪ್ಪ ಪೂಜಾರಿ, ಗಣೇಶ್ ಪೆಲತ್ತಿಮಾರ್, ಶ್ರೀಶ ಆರ್, ನಾರಾಯಣ ಪೂಜಾರಿ ಕೇದಿಗೆ, ವಿಜಯ ತುಕಾರಾಮ, ಜಯಂತಿ ಈಶ್ವರ ಪೂಜಾರಿ ಉಪಸ್ಥಿತರಿದ್ದರು.
ಸಂಘಕ್ಕೆ ಶೇಂದಿ ಹಾಕುತ್ತಿರುವ ಮೂರ್ತೆದಾರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಪಾಧ್ಯಕ್ಷ ಮಾಧವ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಯೋಗೀಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಕೃತಿಕ್ಷಾ ವಂದಿಸಿದರು. ಪಿಗ್ಮಿ ಸಂಗ್ರಾಹಕ ರಘು ಎಂ, ಆಭರಣ ಪರಿವೀಕ್ಷಕ ನಾಗೇಶ್ ಆಚಾರ್ಯ ಸಹಕರಿಸಿದರು.