

ಕೋಟ: ಸಹಾಯಕ ಪ್ರಾಧ್ಯಾಪಕ ಕೋಟ ಶಮಂತ ಕುಮಾರ ಕೆ.ಎಸ್ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಇತ್ತೀಚೆಗೆ ಪಿಎಚ್.ಡಿ ಪದವಿ ಪ್ರದಾನಿಸಿದೆ. ಅವರು ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾರ್ಗದರ್ಶನದಲ್ಲಿ ಕನ್ನಡದಲ್ಲಿ ಠಾಕೂರ ನಾಟಕಗಳು ಬಿಡುಗಡೆಯ ಕಥನಗಳು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಕೋಟತಟ್ಟು ಗ್ರಾಮದ ಶ್ರೀಧರ ಗಾಣಿಗ ಮತ್ತು ಭಾಗಿರಥಿ ದಂಪತಿ ಪುತ್ರನಾಗಿದ್ದು, ಪ್ರಸ್ತುತ ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.