ಪೊಲೀಸರ ವಿರುದ್ಧ ಗರಂ ಆದ ಶಾಲಿನಿ ರಜನೀಶ್​: ಎಸ್​ಪಿ ಕೃಷ್ಣಕಾಂತ್​ಗೆ ತರಾಟೆ; ಕಾರಣ...

Shalini Rajanish
Published on

ಧಾರವಾಡ: ಹಿರಿಯ ಐಎಎಸ್​ ಅಧಿಕಾರಿ ಶಾಲಿನಿ ರಜನೀಶ್​ ಅವರು ಪೊಲೀಸರ ವಿರುದ್ಧ ಗರಂ ಆಗಿದ್ದು, ಎಸ್​​ಪಿ ಕೃಷ್ಣಕಾಂತ್, ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್​ಗೂ ಕರೆ ಮಾಡಿ ಗರಂ ಆಗಿ ಮಾತನಾಡಿದ್ದಾರೆ.

ಇವೆಲ್ಲ ನಡೆದಿದ್ದು ಮಂಗಳವಾರ ಬೆಳಗ್ಗೆ ಧಾರವಾಡದಲ್ಲಿ.. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿರುವ ಅವರು ಮತ ಎಣಿಕೆ ಉಸ್ತುವಾರಿ ನೋಡಿಕೊಳ್ಳಲು ಆಗಮಿಸಿದ ವೇಳೆ ಪೊಲೀಸರ ಮಾಡಿದ ಯಡವಟ್ಟಿನಿಂದಾಗಿ ಇಷ್ಟೆಲ್ಲ ಆಗಿದೆ.

ಸ್ಟ್ರಾಂಗ್ ರೂಮ್ ತೆರೆಯುವ ಸಂದರ್ಭ ಅವರು ಹಾಜರಿರಬೇಕಿದ್ದ‌ರಿಂದ ಅಲ್ಲಿಗೆ ಆಗಮಿಸಿದ್ದರು. ಆದರೆ ಚುನಾವಣಾ ವೀಕ್ಷಕರಾಗಿರುವ ಅವರ ಕಾರನ್ನೇ ಪೊಲೀಸರು ಗೇಟ್​ ಬಳಿ ತಡೆದಿದ್ದರು. ಇದರಿಂದ ಕೊಂಚ ಮುಜುಗರಕ್ಕೆ ಒಳಗಾದ ಅವರು ಪೊಲೀಸರ ವಿರುದ್ಧ ಸಿಟ್ಟಾದರು. ಮಾತ್ರವಲ್ಲ ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್‌ಗೆ ಕರೆ ಮಾಡಿ ಗರಂ ಆಗಿ ಮಾತನಾಡಿದರು. ಒಳ ಪ್ರವೇಶಿಸಿದ ಬಳಿಕ ಎಸ್​ಪಿ ಕೃಷ್ಣಕಾಂತ್ ಅವರನ್ನೂ ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net