ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಆಕ್ರೋಶ: ಸಾತನೂರಿನಲ್ಲಿ ಚಾಲಕ, ನಿರ್ವಾಹಕರೊಂದಿಗೆ ವಾಗ್ವಾದ

Hook for free travel in inter-state buses
ಸಾಂದರ್ಭಿಕ ಚಿತ್ರ
Published on

ಮಂಡ್ಯ: ಕಾಂಗ್ರೆಸ್ ಶಕ್ತಿ ಯೋಜನೆಯ ಅವಾಂತರ ಮುಂದುವರೆದಿದ್ದು, ಗುರುವಾರ ಗಂಟೆಗಟ್ಟಲೇ ಕಾದರೂ ಬಸ್ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ವಿದ್ಯಾರ್ಥಿಗಳು ತಾಲೂಕಿನ ಸಾತನೂರು ಗ್ರಾಮದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಹೆಚ್ಚಿನ ಪ್ರಯಾಣಿಕರಿದ್ದ ಕಾರಣ ಸರ್ಕಾರಿ ಬಸ್ ನಿಲ್ಲಿಸಿಲ್ಲ. ಇದರಿಂದಾಗಿ ಸುಮಾರು ಹೊತ್ತು ಕಾದರೂ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದ ಕಾರಣ ಅಸಮಾಧಾನಗೊಂಡರು. ಈ ವೇಳೆಯೇ ಬಂದ ಸಾರಿಗೆ ಬಸ್ ಅನ್ನು ವಿದ್ಯಾರ್ಥಿಗಳು ತಡೆದರು.

ಬಸ್ ತಡೆದ ಹಿನ್ನೆಲೆಯಲ್ಲಿ ಚಾಲಕ, ನಿರ್ವಾಹಕ ಹಾಗೂ ವಿದ್ಯಾರ್ಥಿಗಳು ನಡುವೆ ವಾಗ್ವಾದ ನಡೆಯಿತು. ಇತ್ತ ಬಸ್ ತಡೆದಿದ್ದಕ್ಕೆ ಮಹಿಳಾ ಪ್ರಯಾಣಿಕರು ಆಕ್ರೋಶ ಹೊರಹಾಕಿದರು. ಬಸ್ ಸಂಪೂರ್ಣ ತುಂಬಿದೆ. ಈ ವೇಳೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ. ಸುತ್ತಮುತ್ತಲಿನ ಗ್ರಾಮಕ್ಕೆ ಒಂದೇ ಬಸ್ ಇದೆ. ಅಧಿಕಾರಿಗಳು ಹೆಚ್ಚುವರಿ ಬಸ್ ಬಿಡಬೇಕು. ವಿದ್ಯಾರ್ಥಿಗಳು ಸಹ ತಾಳ್ಮೆ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net