

ಹರಿಹರ: ಆ.15ರಿಂದ ಸ್ತ್ರೀಶಕ್ತಿ ಯೋಜನೆ ರದ್ದಾಗುತ್ತದೆ. ಇನ್ಮೇಲೆ ಮಹಿಳೆಯರು ಬಸ್‌ನಲ್ಲಿ ದುಡ್ಡು ಕೊಟ್ಟು ಪ್ರಯಾಣಿಸಬೇಕು ಎಂಬ ಗಾಳಿ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಭಾನುವಾರ ಹರಿಹರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಸ್‌ಗಳು ಮಹಿಳೆಯರಿಂದ ತುಂಬಿದ್ದವು.
ಈ ನಿಲ್ದಾಣ ರಾಜ್ಯದ ಮಧ್ಯಭಾಗದಲ್ಲಿರುವುದರಿಂದ ನಾಲ್ಕು ದಿಕ್ಕುಗಳಿಂದಲೂ ದಿನಕ್ಕೆ ಸಾವಿರಾರು ಬಸ್‌ಗಳು ಹಾಗೂ ಪ್ರಯಾಣಿಕರು ಬಂದು ಹೋಗುತ್ತಾರೆ.
ಹರಿಹರದಿಂದ ಧರ್ಮಸ್ಥಳ, ಮಂತ್ರಾಲಯ, ಸವದತ್ತಿ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಈ ನಿಲ್ದಾಣವೇ ನೇರ ಸಂಪರ್ಕದ ಕೊಂಡಿ. ಇದೇ ನಿಲ್ದಾಣದಿಂದ ನೇರ ಸಾರಿಗೆ ಸಂಪರ್ಕ ಇರುವುದರಿಂದ ಸಾಮಾನ್ಯವಾಗಿ ಪ್ರಮಾಣಿಕರ ಸಂಖ್ಯೆ ಹೆಚ್ಚು.
ಸರ್ಕಾರದ ಈ ಯೋಜನೆಯಿಂದಾಗಿ ಪ್ರಮಾಣಿಕರ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಅದರಲ್ಲೂ ಭಾನುವಾರ ಅಧಿಕವಾಗಿತ್ತು. ಪ್ರಮಾಣಿಕರನ್ನು ನಿಯಂತ್ರಿಸಲು ಪೊಲೀಸರು ಬರಬೇಕಾಯಿತು.
ಬಸ್ ನಿಲ್ದಾಣಕ್ಕೆ ಬರುತ್ತಿದಂತೆ ಸೀಟಿಗಾಗಿ ಪ್ರಮಾಣಿಕರು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಹಿಳೆಯರಿಗೆ ಉಚಿತ ಪ್ರಯಾಣ ರದ್ದಾಗುತ್ತದಂತೆ ಹೌದಾ.. ಎಂದು ಒಬ್ಬರಿಗೊಬ್ಬರು ಮಾತಾಡಿಕೊಳ್ಳುವುದು ಸಾಮಾನ್ಯವಾಗಿದೆ.