ಶಕ್ತಿ ವಿದ್ಯಾಸಂಸ್ಥೆಯಲ್ಲಿ ವೃಕ್ಷಬಂಧನ ಆಚರಣೆ

rrrrrrrrrrr
Published on



ಮಂಗಳೂರು : ಶಕ್ತಿನಗರದ ಶಕ್ತಿ ವಸತಿಶಾಲೆಯ ಇಕೋ-ಕ್ಲಬ್ ವತಿಯಿಂದ ’ವೃಕ್ಷಬಂಧನ’ ಆಚರಿಸಲಾಯಿತು. ವಿದ್ಯಾರ್ಥಿಗಳು ಮರಗಳಿಂದ ಉದುರಿದ ಎಲೆಗಳು ಹಾಗೂ ಹೂವುಗಳನ್ನು ಬಳಸಿ ನೈಸರ್ಗಿಕ ರಾಖಿ ನಿರ್ಮಾಣ ಮಾಡಿ ಮರಗಳಿಗೆ ಕಟ್ಟುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು.
ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ಮಾತನಾಡಿ ಮನೆಯ ಸುತ್ತಮುತ್ತಲೂ ಗಿಡ ನೆಟ್ಟು ಬೆಳೆಸಬೇಕು, ಇದರಿಂದ ಪ್ರಪಂಚದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಮ್ಮ ನಡುವೆಯೇ ಅನೇಕ ಮಹನೀಯರು ಪರಿಸರಕ್ಕಾಗಿ ಜೀವನವನ್ನೇ ಸಮರ್ಪಿಸಿದವರಿದ್ದಾರೆ. ಅವರ ತ್ಯಾಗ ಮತ್ತು ಸಂಕಲ್ಪ ಎಲ್ಲರಿಗೂ ಅನುಸರಣಿಯ ಎಂದರು. ಶಕ್ತಿ ವಸತಿಶಾಲೆಯ ಪ್ರಾಂಶುಪಾಲ ರವಿಶಂಕರ ಹೆಗಡೆ, ಉಪಪ್ರಾಂಶುಪಾಲ ದೀಪಕ್ ಕುಡ್ವ, ಇಕೋ- ಕ್ಲಬ್‌ನ ನಿರ್ದೇಶಕ ಶಿಕ್ಷಕರಾದ ಅಪೂರ್ವಾ, ಪಂಚಮಿ, ಆಶಾ ಹಾಗೂ ಮಧುರಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net