ಮಾನವೀಯತೆಯಿಂದ ಬದುಕಿದರೆ ಜೀವನಕ್ಕೆ ಸಾರ್ಥಕತೆ -ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ ಹೆಗ್ಡೆ

ssssssssssss
Published on


ಮಂಗಳೂರು : ಹಿರಿಯರು ನೀಡಿರುವ ಮೌಲ್ಯಗಳ ಪಾಠವನ್ನು ನಾವು ಶಾಲೆಯಲ್ಲಿ ಅಳವಡಿಸಿದಾಗ ಮಾತ್ರ ಸಮಾಜದಲ್ಲಿ
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಮಾನವೀಯತೆಯಿಂದ ಬದುಕಿದಾಗ ಮಾನವ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ. ನಾವು ಬೇರೆಯವರಿಗೆ ಮೋಸ, ವಂಚನೆ ಮಾಡದಿದ್ದಾಗ ನಮ್ಮ ಜೀವನವು ಸಂತೋಷದಿಂದ ಸಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ ಹೆಗ್ಡೆ ಹೇಳಿದರು.
ಶಕ್ತಿ ನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು ‘ ದುರಾಸೆ ಸಮಾಜಕ್ಕೆ ದೊಡ್ಡ ರೋಗ. ದುರಾಸೆಗೆ ಯಾವುದೇ ಮದ್ದಿಲ್ಲ. ಇನ್ನೊಬ್ಬರಿಗೆ ತೊಂದರೆ ಕೊಟ್ಟಾದರು ನಾನು ಶ್ರೀಮಂತನಾಗಬೇಕೆಂಬ ಯೋಚನೆಯಿಂದ ಮನುಷ್ಯ ಹೊರಬಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ನಾನು ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಿದ್ದೇನೆ. ಇದು ನನಗೆ ತೃಪ್ತಿಯನ್ನು ಕೊಟ್ಟಿದೆ. ಈಗಾಗಲೇ 1740 ಶಾಲೆಗಳಿಗೆ ದೇಶದ್ಯಾಂತ ಭೇಟಿ ನೀಡಿದ್ದೇನೆ. ಅಲ್ಲಿಯ ಸ್ಥಿತಿಗತಿಗಳ ಕುರಿತಂತೆ ನನಗೆ ಅರಿವು ಇದೆ. ಭ್ರಷ್ಟಾಚಾರದಲ್ಲಿ ತೊಡಗಿರುವರನ್ನು ನನ್ನ ಅವಧಿಯಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡಿರುವ ಬಗ್ಗೆ ನನಗೆ ತೃಪ್ತಿಯಿದೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದರು.
ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ.ನಾಕ್, ಸಟ್ರಸ್ಟಿ ಡಾ.ಮುರಳಿಧರ್ ನಾಕ್, ಶಕ್ತಿ ಪ.ಪೂ.ಕಾಲೇಜು ಪ್ರಾಂಶುಪಾಲ ವೆಂಕಟೇಶ ಮೂರ್ತಿ ಮತ್ತು ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ಪ್ರಾಂಶುಪಾಲ ರವಿಶಂಕರ್ ಹೆಗಡೆ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಕ್ ಸ್ವಾಗತಿಸಿ, ಸುಶಿಲ್ ಕುಮಾರ್ ರಾಥಿ ವಂದಿಸಿದರು. ಚೈತ್ರಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net