ಸೆ.2 ರಂದು ಶಕ್ತಿ ವಸತಿ ಶಾಲೆಯಲ್ಲಿ ‘ಕೃಷ್ಣಮಯ 2023’ ಕೃಷ್ಣ ವೇಷ, ಗೀತಾ ಕಂಠಪಾಠ, ಕುಣಿತ ಭಜನೆ ಸ್ಪರ್ಧೆ

krishna
Published on

ಮಂಗಳೂರು: ನಗರ ಹೊರವಲಯದ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ‘ಕೃಷ್ಟಮಯ 2023’ ಕೃಷ್ಣ ವೇಷ ಸ್ಪರ್ಧೆ ಸೆಪ್ಟಂಬರ್ 2 ರಂದು ಬೆಳಗ್ಗೆ 9 ಕ್ಕೆ ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ.
ವಿವರ ಹೀಗಿದೆ:
ವಿಭಾಗ 1ರಲ್ಲಿ 3 ವರ್ಷ ತನಕದ ಮಕ್ಕಳಿಗೆ ಮುದ್ದುಕೃಷ್ಣ, 4 ರಿಂದ 5 ವರ್ಷ ತನಕದ ಮಕ್ಕಳಿಗೆ ಬೆಣ್ಣೆ ಕೃಷ್ಣ, 1 ರಿಂದ 4ನೇ ತರಗತಿಯ ಮಕ್ಕಳಿಗೆ ಯಶೋದ ಕೃಷ್ಣ, 5 ರಿಂದ 7ನೇ ತರಗತಿಯ ಮಕ್ಕಳಿಗೆ ದಾಸರ ಕೀರ್ತನೆಗಳು, 8 ರಿಂದ 10ನೇ ತರಗತಿಯ ಮಕ್ಕಳಿಗೆ ಗೋಪಿಕಾ ಕೃಷ್ಣ.
ಗೀತಾ ಕಂಠಪಾಠ ಸ್ಪರ್ಧೆಯಲ್ಲಿ 1-5 ನೇ ತರಗತಿಯ ಮಕ್ಕಳಿಗೆ ಧ್ಯಾನ ಶ್ಲೋಕ 1-8, 6 ರಿಂದ 7ನೇ ತರಗತಿಯ ಮಕ್ಕಳಿಗೆ ಅಧ್ಯಾಯ 12(1-10ನೇ ಶ್ಲೋಕ) 8 ರಿಂದ 10 ನೇ ತರಗತಿಯ ಮಕ್ಕಳಿಗೆ ಅಧ್ಯಾಯ 15, 1-10ನೇ ಶ್ಲೋಕ. ಚಿತ್ರಕಲಾ ಸ್ಪರ್ಧೆ 8 ರಿಂದ 10 ಶ್ರೀ ಕೃಷ್ಣನ ಲೀಲೆಗಳು.
ಕುಣಿತ ಭಜನೆ 6 ರಿಂದ 10 ತರಗತಿ ಶ್ರೀ ಕೃಷ್ಣನ ಭಜನೆಗಳು 10 ಜನರ ತಂಡಕ್ಕೆ 4 ನಿಮಿಷ ಅವಕಾಶ . ಒಂದು ಶಾಲೆಯಿಂದ ಎಷ್ಟು ತಂಡಗಳಿಗೂ ಭಾಗವಹಿಸುವ ಅವಕಾಶವಿದೆ. ವೆಬ್‌ಸೈಟ್ ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೋಸ್ಕರ ಖಠಿಜಿ.ಛಿಛ್ಠ.ಜ್ಞಿ ಮತ್ತು ದೂರವಾಣಿ ಸಂಖ್ಯೆ 0824-2231452/ 8431247433 ಸಂಪರ್ಕಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net