ಭಕ್ತರ ಜೈಘೋಷಗಳ ಮಧ್ಯೆ ಚಂದ್ರಲಾಂಬೆ ರಥೋತ್ಸವ

ಹೊನಗುಂಟಾದಲ್ಲಿ ಭಕ್ತರ ಜೈಘೋಷಗಳ ಮಧ್ಯೆ ಚಂದ್ರಲಾ ಪರಮೇಶ್ವರಿ ಭವ್ಯ ರಥೋತ್ಸವ ನಡೆಯಿತು. ಅರುಣಭಟ್ಟ ಜೋಶಿ, ಅರವಿಂದಭಟ್ಟ ಜೋಶಿ, ಅಶೋಕಭಟ್ಟ ಜೋಶಿ ಇತರರಿದ್ದರು.
Published on

ಶಹಾಬಾದ್: ಸುಕ್ಷೇತ್ರ ಹೊನಗುಂಟಾದಲ್ಲಿ ಪುರಾಣ ಪ್ರಸಿದ್ಧ ಶ್ರೀ ಚಂದ್ರಲಾ ಪರಮೇಶ್ವರಿ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ ಭಕ್ತರ ಜೈಘೋಷಗಳ ಮಧ್ಯೆ ಭವ್ಯ ರಥೋತ್ಸವ ನಡೆಯಿತು.

ಬೆಳಗ್ಗೆ ಅರ್ಚಕರಾದ ಅರುಣಭಟ್ಟ ಜೋಶಿ, ಅರವಿಂದ ಭಟ್ಟ ಜೋಶಿ, ಅಶೋಕ ಭಟ್ಟ ಜೋಶಿ ಅವರಿಂದ ಕಾಕಡಾರತಿ, ದೇವಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ ಜರುಗಿತು. ನಂತರ ವಿನಯ ಅಂಕಿತಾ ದಂಪತಿಯಿಂದ ರಥಾಂಗ ಹೋಮ ನೆರವೇರಿತು. ಸಂಜೆ ರಥೋತ್ಸವದ ನಂತರ ಮಹಾ ಮಂಗಳಾರತಿ, ಮಹಾಪ್ರಸಾದ ವಿತರಣೆ, ಭಕ್ತರಿಂದ ಸಂಗೀತ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ, ಅಹೋರಾತ್ರಿ ಭಜನೆ ನಡೆಯಿತು.

ದೇವಸ್ಥಾನದ ಮಲ್ಹಾರ ಭಟ್ಟ ಜೋಶಿ, ಅವಧೂತ ಭಟ್ಟ ಜೋಶಿ, ಅನಂತ ಜೋಶಿ, ಜನಕ ಕುಮಾರ, ರಾಮರಾವ ದೇಶಮುಖ, ಪ್ರವೀಣ ಹೊನಗುಂಟಿಕರ್, ಡಾ.ಶಂಕರ ಸೋಮಯಾಜಿ, ಅಶೋಕ ಸೋಮಯಾಜಿ, ಲಕ್ಷ್ಮಣ ಭಟ್ಟ ಜೋಶಿ, ಶ್ರೀಪಾದ ಜೋಶಿ, ನಂದೀಶ, ರವಿ ಕುಲಕರ್ಣಿ, ಗಜಾನನ ಕುಲಕರ್ಣಿ, ಪರಮೇಶ್ವರ ಕೊಡಸಾ, ಮಾರ್ಥಂಡಪ್ಪ ಭುರ್ಲಿ, ಶಾಂತಲಿಂಗ ಟೆಂಗಳಿ, ಅರುಣಕುಮಾರ ಪಾಲ್ಗೊಂಡಿದ್ದರು. ಪಿಐ ನಟರಾಜ ಲಾಡೆ, ಪಿಎಸ್‌ಐ ಶ್ರೀಕಾಂತ ನಾಯಕ ದೇವಿ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net