ಶಹಾಬಾದ್: ಕಿಡಿಗೇಡಿಗಳನ್ನು ಕೂಡಲೇ ಬಂಧನ ಮಾಡಿ

19 10 SBD 1
Published on

ಶಹಾಬಾದ್: ಮುತ್ತಗಾದಲ್ಲಿ ದುಷ್ಕರ್ಮಿಗಳು ಶ್ರೀ ಬಸವಣ್ಣನ ವಿಗ್ರಹವನ್ನು ಧ್ವಂಸಗೊಳಿಸಿರುವು ಅಮಾನವೀಯ ಘಟನೆಯಾಗಿದ್ದು, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ನಿರ್ಲಕ್ಷÈ ವಹಿಸಿದರೆ ಎಲ್ಲೆಡೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಎಚ್ಚರಿಕೆ ನೀಡಿದರು.

ಮುತ್ತಗಾ ಗ್ರಾಮದ ಶ್ರೀ ಕಂಠಿ ಬಸವೇಶ್ವರ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದ ಅವರು, ಚಿತ್ತಾಪುರ ಕ್ಷೇತ್ರದಲ್ಲಿ ನಿರಂತರವಾಗಿ ಮಹಾತ್ಮರಿಗೆ ಅವಮಾನ ಹಾಗೂ ಅಪಮಾನ ಮಾಡಲಾಗುತ್ತಿದೆ. ಸರ್ಕಾರ ಹಾಗೂ ಪೊಲೀಸರ ನಿರ್ಲಕ್ಷÈದಿಂದಾಗಿ ಇಂತಹ ಅವಘಡಗಳು ಮರುಕಳಿಸುತ್ತಿವೆ. ಕೂಡಲೇ ಕಾರಣರಾದವರನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್, ಪ್ರಮುಖರಾದ ಶರಬಣ್ಣ ಮಾವೂರ, ಬಸವರಾಜ ಮಾವೂರ, ಈರಣ್ಣ ಮಾವೂರ, ರಾಣೋಜಿ ಮಾವೂರ, ಅಶೋಕ ಶರಸಗಿ, ಚಂದ್ರಕಾAತ ಮಾವೂರ, ಡಾ.ಮಹೇಂದ್ರ ಕೋರಿ, ಕೆಂಚಪ್ಪ ಪೂಜಾರಿ, ಚಂದ್ರಕಾAತ ಭಂಕೂರ, ಶ್ರೀಕಾಂತ ಸುಲೇಗಾಂವ್, ಬಸವರಾಜ ಕೋರಿ, ಬಸವರಾಜ ಪಂಚಾಳ, ಬಸವರಾಜ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net