

ಚಿಂಚೋಳಿ: ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ ದಸರಾ ಕ್ರೀಡಾಕೂಟದಲ್ಲಿ ಶಾದಿಪೂರ ತಂಡದ ಯುವಕರು ಖೋ ಖೋ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕ್ರೀಡಾ ಅಧಿಕಾರಿ ಮಲ್ಲಿಕಾರ್ಜುನ ನೆಲ್ಲಿ ತಿಳಿಸಿದ್ದಾರೆ.
ಗೆಲುವು ಸಾಧಿಸಿದ ತಂಡಕ್ಕೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ವೇಳೆ ಕ್ರೀಡಾಪಟುಗಳಾದ ಸಿಕಂದರ್, ದೀಲಿಪ, ಅರ್ಜುನ, ಮಹೇಶ್, ಸಾಗರ್, ಸಚಿನ್, ಅಕ್ಷಯ, ಯುವರಾಜ್, ಜೀವನ, ಆನಂದ, ಗೇಮುಸಿಂಗ್, ಗೋವರ್ಧನ ಸೇರಿದಂತೆ ಅನೇಕರು ಇದ್ದರು.