ಶಬರಿಮಲೆಯಲ್ಲಿ ಅವ್ಯವಸ್ಥೆಗೆ ಬಿಜೆಪಿ ಖಂಡನೆ

ffffffffff
Published on



ಮಂಗಳೂರು : ಪ್ರಸಿದ್ಧ ಪುಣ್ಯಕ್ಷೇತ್ರಯ ಶಬರಿಮಲೆ ಶ್ರೀ ಅಯಪ್ಪ ಸನ್ನಿಧಾನದಲ್ಲಿ ಭಕ್ರರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಶಬರಿಮಲೆ ಕ್ಷೇತ್ರದಿಂದ ಕೋಟ್ಯಾಂತರ ರೂಪಾಯಿ ಕಾಣಿಕೆ ಹಣ ದೋಚುವ ಕೇರಳದ ಪಿಣರಾಯಿ ಸರ್ಕಾರ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲತೆಗಳನ್ನು ಕಲ್ಪಿಸಿಕೊಡದಿರುವುದು ಖಂಡನೀಯ ಬಿಜೆಪಿ ದ.ಕ.
ಜಿಲ್ಲಾಧ್ಯಕ್ಷ ಸುದರ್ಶನ ಎಂ. ಹೇಳಿದ್ದಾರೆ.
ಶಬರಿಮಲೆಗೆ ಪ್ರತೀ ವರ್ಷ ಮಕರ ಜ್ಯೋತಿ ದರ್ಶನಕ್ಕೆ ಕರ್ನಾಟಕದಿಂದ ಕೂಡ ಲಕ್ಷಾಂತರ ವೃತಧಾರಿಗಳು ತೆರಳುತ್ತಾರೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇರಳ ಸರ್ಕಾರದ ಜತೆ ಮಾತುಕತೆ ನಡೆಸಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಲು ಕ್ರಮ ಜರುಗಿಸಬೇಕೆಂದು ಅವರು ಅಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net